ನವದೆಹಲಿ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಇಲಾಖೆಗಳು ಕಟ್ಟಡ ನಿರ್ಮಾಣ ಮಾಡುವಾಗ ಒಟ್ಟು 5ರಷ್ಟು ಎಫ್‌ಎಆರ್ (ಫ್ಲೋರ್ ಏರಿಯಾ ರೇಷಿಯೊ) ನೀಡಲು ಕರ್ನಾಟಕ ಸರ್ಕಾರ ಮುಂದಾಗಿದೆ. ಈ ಮೂಲಕ ಬೆಂಗಳೂರು ಉಪನಗರ ರೈಲು ಯೋಜನೆಗೆ ಸಂಪನ್ಮೂಲ ಕ್ರೋಡೀಕರಣ ಮಾಡುವ ಗುರಿ ಹೊಂದಿದೆ.

ಬಿಡಿಎ 2015ರ ನಗರ ಮಹಾಯೋಜನೆ ಪ್ರಕಾರ ಬೆಂಗಳೂರಿನಲ್ಲಿ ಗರಿಷ್ಠ 3.25ರಷ್ಟು ಎಫ್‌ಎಆರ್‌ಗೆ ಅವಕಾಶವಿದೆ. 2031ರ ನಗರ ಮಹಾ ಯೋಜನೆಯ ಈ ಹಿಂದಿನ ಕರಡಿನಲ್ಲಿ ಮೆಟ್ರೊ ನಿಲ್ದಾಣಗಳ ಬಳಿ ಗರಿಷ್ಠ 4 ಎಫ್‌ಎಆರ್‌ವರೆಗೆ ಅವಕಾಶ ಕಲ್ಪಿಸುವ ಪ್ರಸ್ತಾಪವಿತ್ತು. ರೈಲ್ವೆ, ಆದಾಯ ತೆರಿಗೆ ಇಲಾಖೆ ಹಾಗೂ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಸೇರಿ ಹಲವು ಇಲಾಖೆಗಳು ಎಫ್ಎಆರ್ ಅನ್ನು 5ಕ್ಕೆ ಏರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ವಿವಿಧ ಇಲಾಖೆಗಳು ಕಟ್ಟಡ ನಿರ್ಮಿಸುವ ವೇಳೆ 5 ಎಫ್‌ಎಆರ್ ನೀಡಲು ಅನುಮೋದನೆ ಕೋರಿದರೆ ಅವಕಾಶ ನೀಡಬಹುದು ಎಂದು ನಗರಾಭಿವೃದ್ಧಿ ಇಲಾಖೆ ಪ್ರಸ್ತಾವನೆ ಸಿದ್ಧಪಡಿಸಿದ್ದು, ಮುಖ್ಯಮಂತ್ರಿ ಅವರ ಒಪ್ಪಿಗೆ ಬಾಕಿ ಇದೆ.

ಆದಾಯ ತೆರಿಗೆ ಇಲಾಖೆಯು ಬೆಂಗಳೂರಿನಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿದೆ. ಅದರ ಹೊಣೆಯನ್ನು ಕೇಂದ್ರ ಲೋಕೋಪಯೋಗಿ ಇಲಾಖೆಗೆ ವಹಿಸಿದೆ. ಈ ಕಟ್ಟಡಕ್ಕೆ ಐದು ಎಫ್ಎಆರ್ ನೀಡುವಂತೆ ಈ ಇಲಾಖೆಗಳ ಅಧಿಕಾರಿಗಳು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಇತ್ತೀಚೆಗೆ ಮನವಿ ಮಾಡಿದ್ದಾರೆ.

ನಾಗವಾರ ಮೆಟ್ರೊ ನಿಲ್ದಾಣದಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ಅನುವಾಗುವಂತೆ 5 ಎಫ್‌ಎಆರ್ ಬಳಸಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಬಿಎಂಆರ್‌ಸಿಎಲ್ 2021ರ ನವೆಂಬರ್ 6ರಂದು ಪ್ರಸ್ತಾವ ಸಲ್ಲಿಸಿದೆ.

ರೈಲ್ವೆ ಭೂಮಿ, ರೈಲ್ವೆ ನಿಲ್ದಾಣ ಹಾಗೂ ರೈಲ್ವೆ ಕಾಲೊನಿಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಹೂಡಿಕೆ ತರಲು ರೈಲ್ವೆ ಇಲಾಖೆಗೆ ಉದ್ದೇಶಿಸಿದೆ. ಇದಕ್ಕೆ ರಾಜ್ಯ ಸರ್ಕಾರ ಅನುವು ಮಾಡಿಕೊಡಬೇಕು ಎಂದು ರೈಲ್ವೆ ಸಚಿವಾಲಯ 2021ರ ಜೂನ್ 25ರಂದು ಪತ್ರ ಬರೆದಿದೆ.

ಉಪನಗರ ರೈಲು ಯೋಜನೆಯ ಅನುಷ್ಠಾನಕ್ಕೆ ಬೆಂಗಳೂರಿನಲ್ಲಿ ರೈಲ್ವೆ ಆಸ್ತಿಯಿಂದ ₹4,186 ಕೋಟಿಯಷ್ಟು ನಗದೀಕರಣಕ್ಕೆ (ಸಂಪನ್ಮೂಲ ಸಂಗ್ರಹಕ್ಕೆ) ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆ–ರೈಡ್) ಮುಂದಾಗಿದೆ. ಮೊದಲ ಹಂತದಲ್ಲಿ 56.38 ಎಕರೆ ಆಸ್ತಿ ನಗದೀಕರಣಕ್ಕೆ ಅಣಿಯಾಗಿದೆ. ಉಪನಗರ ರೈಲು ಯೋಜನೆಯ ಕಾರಿಡಾರ್‌ಗಳ ಆಸುಪಾಸಿನಲ್ಲಿರುವ ರೈಲ್ವೆ ಜಾಗದಲ್ಲಿ ಬಹುಮಹಡಿ ಕಟ್ಟಡಗಳಿಗೆ ಅನುಮತಿ ನೀಡುವಾಗ 5ರವರೆಗೆ ಎಫ್‌ಎಆರ್ ಬಳಕೆಗೆ ಅವಕಾಶ ಕಲ್ಪಿಸುವ ಮೂಲಕ ಇಲ್ಲಿ ಹೂಡಿಕೆಗೆ ಅನುಕೂಲ ಕಲ್ಪಿಸುವುದು ಇದರ ಉದ್ದೇಶ. ಎಫ್‌ಎಆರ್ ಪ್ರಮಾಣವನ್ನು 5ಕ್ಕೆ ಹೆಚ್ಚಿಸಿದರೆ ಉಪನಗರ ರೈಲು ಯೋಜನೆಗೆ ಸಂಪನ್ಮೂಲ ಕ್ರೋಡೀಕರಣಕ್ಕೆ ಅನುಕೂಲವಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಎಫ್‌ಎಆರ್ ಎಂದರೇನು?
ನಿವೇಶನದ ಅಳತೆ ಆಧರಿಸಿ ನಿರ್ಮಿಸಬಹುದಾದ ಕಟ್ಟಡದ ವಿಸ್ತೀರ್ಣ ಮತ್ತು ಅಂತಸ್ತುಗಳ ಮಿತಿಯೇ ಎಫ್‌ಎಆರ್.

ನಿವೇಶನದ ವಿಸ್ತೀರ್ಣ ಮತ್ತು ಅದು ಇರುವ ರಸ್ತೆ ಅಗಲವನ್ನು ಆಧರಿಸಿ ಎಷ್ಟು ಮಹಡಿಯ ಕಟ್ಟಡ ನಿರ್ಮಿಸಬಹುದು ಅಥವಾ ಎಷ್ಟು ಮಹಡಿಗಳನ್ನು ನಿರ್ಮಿಸಲು ಅವಕಾಶ ನೀಡಬಹುದು ಎಂಬುದನ್ನು ಲೆಕ್ಕಾಚಾರ ಹಾಕಲಾಗುತ್ತದೆ.

ಎಫ್‌ಎಆರ್‌ಗಳನ್ನು ಮೂಲ ಎಫ್‌ಎಆರ್ (ನಿವೇಶನದ ಅಳತೆ ಆಧರಿಸಿದ್ದು), ಟಿಡಿಆರ್ (ಅಭಿವೃದ್ಧಿ ಹಕ್ಕು ವರ್ಗಾವಣೆ) ಆಧಾರದ ಎಫ್‌ಎಆರ್ ಹಾಗೂ ಪ್ರೀಮಿಯಂ ಎಫ್‌ಎಆರ್ ಎಂದು ವರ್ಗೀಕರಿಸಬಹುದು. ಪ್ರೀಮಿಯಂ ಎಫ್‌ಎಆರ್‌ಗಳನ್ನು ಸರ್ಕಾರವೇ ಮಾರಾಟ ಮಾಡುತ್ತದೆ.

ಟಿಡಿಆರ್ ಅಥವಾ ಪ್ರೀಮಿಯಂ ಎಫ್‌ಎಆರ್‌ಗಳನ್ನು ಖರೀದಿಸಿ ಕಟ್ಟಡದಲ್ಲಿ ನಿವೇಶನದ ಅಳತೆಗೆ ನಿಗದಿಪಡಿಸಿದ ಎಫ್‌ಎಆರ್‌ಗಿಂತ ಹೆಚ್ಚುವರಿ ಅಂತಸ್ತುಗಳನ್ನು ನಿರ್ಮಿಸಲು ಅವಕಾಶ ಕಲ್ಪಿಸಲಾಗುತ್ತದೆ. ನಿರ್ದಿಷ್ಟ ಪ್ರದೇಶದಲ್ಲಿ ಎಲ್ಲ ರೀತಿಯ ಎಫ್‌ಎಆರ್‌ಗಳನ್ನು ಸೇರಿಸಿ ಗರಿಷ್ಠ ಎಷ್ಟು ಅಂತಸ್ತುಗಳ ಅಥವಾ ವಿಸ್ತೀರ್ಣದ ಕಟ್ಟಡ ನಿರ್ಮಿಸಬಹುದು ಎಂಬ ಕುರಿತು ನಗರ ಮಹಾಯೋಜನೆಯಲ್ಲಿ ಮಿತಿ ನಿಗದಿಪಡಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.