ಬೆಂಗಳೂರು: ‘ಎಲಿಕ್ಸೈರ್ ವರ್ಲ್ಡ್ ಪ್ರೊಡಕ್ಷನ್ ಹೌಸ್’ ಮಾಡೆಲಿಂಗ್ ಸಂಸ್ಥೆಯಿಂದ ‘ಎಲಿಕ್ಸೈರ್ ಇಂಡಿಯಾ 2020’ ಫ್ಯಾಷನ್ ಶೋ (ಸೌಂದರ್ಯ ಸ್ಪರ್ಧೆ) ಆಗಸ್ಟ್ನಲ್ಲಿ ನಡೆಯಲಿದೆ.

‘ಇದಕ್ಕಾಗಿ ರಾಜ್ಯದ ಬಹುತೇಕ ಎಲ್ಲಾ ನಗರಗಳು ಸೇರಿದಂತೆ ದೇಶದ 40ಕ್ಕೂ ಹೆಚ್ಚು ನಗರಗಳಲ್ಲಿ ಜನವರಿಯಿಂದ ಆಡಿಷನ್ ನಡೆಸಲಾಗುವುದು’ ಎಂದು ಸಂಸ್ಥೆಯ ಸಹ ನಿರ್ದೇಶಕಿ ಎ.ಅಶ್ವಿನಿ ತಿಳಿಸಿದರು.

‘ಮಿಸ್ಟರ್, ಮಿಸೆಸ್ ಮತ್ತು ಮಿಸ್ ಎಂಬ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಾಗುವುದು. ಈ ಹಿಂದಿನ ಸೌಂದರ್ಯ ಸ್ಪರ್ಧೆಯ ವಿಜೇತರು ಮತ್ತು ಈ ಕ್ಷೇತ್ರದ ಪರಿಣತರು ಅರ್ಹ ಸ್ಪರ್ಧಿಗಳ ಆಯ್ಕೆ ನಡೆಸಲಿದ್ದಾರೆ. ಆಡಿಷನ್ನಲ್ಲಿ ಆಯ್ಕೆಯಾದವರಗೆ ತರಬೇತಿ ನೀಡಿ ಸ್ಪರ್ಧೆಗೆ ಅಣಿಗೊಳಿಸಲಾಗುತ್ತದೆ’ ಎಂದು ಅವರು ವಿವರಿಸಿದರು.

‘ಆಗಸ್ಟ್ 28ರಂದು ನಡೆಯಲಿರುವ ಅಂತಿಮ ಸುತ್ತಿನ ಸೌಂದರ್ಯ ಸ್ಪರ್ಧೆಯಲ್ಲಿ ಮೂರು ವಿಭಾಗಗಳಲ್ಲೂ ಪ್ರಥಮ ಸ್ಥಾನ ಪಡೆದವರಿಗೆ ₹1 ಲಕ್ಷ ನಗದು ಬಹುಮಾನ ಮತ್ತು ಸಂಸ್ಥೆಯ ಒಂದು ವರ್ಷದ ಮಾಡಲಿಂಗ್ ಗುತ್ತಿಗೆ ನೀಡಲಾಗುವುದು. ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವವರು ಒಂದು ದಿನ ರಾಜಾತಿಥ್ಯ ಪಡೆಯಲಿದ್ದಾರೆ. ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣಪತ್ರ ವಿತರಿಸಲಾಗುವುದು’ ಎಂದರು.

ಆರು ಮಂದಿ ಮಹಿಳೆಯರೇ ಸೇರಿ ಹುಟ್ಟು ಹಾಕಿರುವ ಈ ಸಂಸ್ಥೆಯನ್ನು 2017ರ ಮಿಸೆಸ್ ಯೂನಿವರ್ಸ್ ಪಲ್ಲವಿ ಕೌಶಿಕ್ ಭಾನುವಾರ ಉದ್ಘಾಟಿಸಿದರು. ಸಂಸ್ಥೆಯ ವೆಬ್ಸೈಟ್ಗೆ (www.elixirworldproductionshouse.com) ಇದೇ ವೇಳೆ ಚಾಲನೆ ನೀಡಲಾಯಿತು. ‘ಧೈರ್ಯ ಮತ್ತು ಛಲ ಇದ್ದರೆ ಮಾಡೆಲಿಂಗ್ನಲ್ಲಿ ಸಾಧನೆ ಮಾಡಬಹುದು’ ಎಂದು ಪಲ್ಲವಿ ಹೇಳಿದರು.

ಕೃಷಿ ತಜ್ಞ ಪ್ರಕಾಶ್ ಕಮ್ಮರಡಿ ಮಾತನಾಡಿ, ‘ಮಾಡೆಲಿಂಗ್ ಕ್ಷೇತ್ರವನ್ನು ಹಗುರವಾಗಿ ಕಾಣಲಾಗದು. ಭಾರತ ಬಡವರ ದೇಶ ಎಂದು ಬಿಂಬಿತವಾಗಿದ್ದ ಸಂದರ್ಭದಲ್ಲಿ ಇಡೀ ಜಗತ್ತೇ ತಿರುಗಿ ನೋಡುವಂತೆ ಮಾಡಿದ್ದು ಇದೇ ಕ್ಷೇತ್ರ. ಕರ್ನಾಟಕದ ಐಶ್ವರ್ಯ ರೈ ಅದಕ್ಕೆ ಕಾರಣಕರ್ತರು ಎಂಬುದು ಹೆಮ್ಮೆಯ ವಿಷಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.