ಬೆಂಗಳೂರು: ದೊಡ್ಡಗುಬ್ಬಿಯ ಕೆ.ಆರ್.ಸಿ. ರಸ್ತೆಯಲ್ಲಿರುವ ‘ನ್ಯೂ ಆರ್ಕ್ ಮಿಷನ್ ಆಫ್ ಇಂಡಿಯಾ ಹೋಮ್ ಆಫ್ ಹೋಪ್’ ಆಶ್ರಮದಲ್ಲಿ ಇರಿಸಲಾಗಿದ್ದ 10 ವಿದೇಶಿ ಪ್ರಜೆಗಳು, ಆಶ್ರಮದ ಕಾಂಪೌಂಡ್ ಹಾರಿ ಪರಾರಿಯಾಗಿದ್ದಾರೆ.

ಜುಲೈ 19ರಂದು ಏಳು ಪ್ರಜೆಗಳು ಹಾಗೂ ಜುಲೈ 27ರಂದು ಮೂವರು ಪ್ರಜೆಗಳು ಪರಾರಿಯಾಗಿದ್ದಾರೆ. ಈ ಬಗ್ಗೆ ಆಶ್ರಮದ ಪ್ರತಿನಿಧಿ ಟಿ. ರಾಜ್ (55) ಅವರು ಕೊತ್ತನೂರು ಠಾಣೆಗೆ ದೂರು ನೀಡಿದ್ದಾರೆ. ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಪರಾರಿಯಾಗಿರುವ ವಿದೇಶಿ ಪ್ರಜೆಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

‘ಬಾಂಗ್ಲಾದೇಶದ ಮೊಹಮ್ಮದ್ ಸುಹೀಲ್ ರಾಣಾ (34), ಝುಲ್ಫಿಕರ್ ಅಲಿ (34), ಉಜ್ಜಲ್ ಅಲಿಯಾಸ್ ಮೊಹಮ್ಮದ್ ರಾಣಾ (30), ಮೊಹಮ್ಮದ್ ಹುಸೇನ್ (25), ಮುಸಾ ಶಕೆ ಅಲಿಯಾಸ್ ಮುಸಾಮೀಯಾ (27), ರಹೀಮ್ (27), ಅರೀಫುಲ್ಲ ಇಸ್ಲಾಂ (26), ಉಗಾಂಡಾದ ಮಹಿಳೆಯರಾದ ನಮಿರೆಂಬೆ ಕ್ಯಾಥರಿನ್ (25), ಮರಿಯಾ (30) ಹಾಗೂ ಚೆರೂಪ್ ಸಿಸ್ಕೊ ಶಿರ್ಹಾ (30) ಪರಾರಿಯಾಗಿದ್ದಾರೆ’ ಎಂದು ಪೊಲೀಸ್ ಮೂಲಗಳು
ಹೇಳಿವೆ.

‘ಕೆಲ ವಿದೇಶಿ ಪ್ರಜೆಗಳು, ವೀಸಾ ಹಾಗೂ ಪಾಸ್ಪೋರ್ಟ್ ಅವಧಿ ಮುಗಿದರೂ ದೇಶದಲ್ಲಿ ಅಕ್ರಮವಾಗಿ ವಾಸವಿದ್ದರು. ಇವರನ್ನು ಪೊಲೀಸರ ಮೂಲಕ ಪತ್ತೆ ಮಾಡಿ ವಶಕ್ಕೆ ಪಡೆದಿದ್ದ ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್ಆರ್ಆರ್ಒ) ಅಧಿಕಾರಿಗಳು, ವಾಪಸು ದೇಶಕ್ಕೆ ಹೋಗುವಂತೆ ಎಚ್ಚರಿಕೆ ನೀಡಿದ್ದರು. ವಿದೇಶಿ ಪ್ರಜೆಗಳು ಕಾಲಾವಕಾಶ ಕೋರಿದ್ದರು.’

‘ದೇಶ ಬಿಟ್ಟು ಹೋಗುವವರೆಗೂ ಎಲ್ಲಿಯೂ ಓಡಾಡದಂತೆ ತಿಳಿಸಿದ್ದ ಎಫ್ಆರ್ಆರ್ಒ ಅಧಿಕಾರಿಗಳು, ಎಲ್ಲ ವಿದೇಶಿ ಪ್ರಜೆಗಳನ್ನು ‘ನ್ಯೂ ಆರ್ಕ್ ಮಿಷನ್ ಆಫ್ ಇಂಡಿಯಾ ಹೋಮ್ ಆಫ್ ಹೋಫ್’ ಆಶ್ರಮದಲ್ಲಿ ಇರಿಸಿದ್ದರು. ಬಾಂಗ್ಲಾ ಪ್ರಜೆಗಳು, ಆಶ್ರಮದ ಕಾಂಪೌಂಡ್ ಹಾರಿ ಪರಾರಿಯಾಗಿದ್ದಾರೆ. ಉಗಾಂಡದ ಮಹಿಳೆಯರು, ಹಗ್ಗದ ಸಹಾಯದಿಂದ ಗೇಟ್ ಹತ್ತಿ ಇಳಿದು ತಪ್ಪಿಸಿಕೊಂಡು ಹೋಗಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.