ಬೆಂಗಳೂರು:ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ, ನೋಂದಣಿ ಸಂಖ್ಯೆ ನಕಲಿ ಫಲಕಗಳ ಹಾವಳಿಯೂ ಜಾಸ್ತಿ ಆಗುತ್ತಿದೆ. ಯಾವುದೇ ತಪ್ಪು ಮಾಡದ ವಾಹನಗಳ ನೈಜ ಮಾಲೀಕರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.

ಸಂಚಾರ ಪೊಲೀಸರ ಕಣ್ತಪ್ಪಿಸಲು ಹಾಗೂ ಅಪರಾಧ ಕೃತ್ಯಗಳನ್ನು ಎಸಗಲು ಕೆಲವರು ನಕಲಿ ಫಲಕಗಳನ್ನು ವಾಹನಗಳಿಗೆ ಅಳವಡಿಸಿಕೊಂಡು ಓಡಾಡುತ್ತಿರುವ ಆತಂಕಕಾರಿ ಸಂಗತಿ ಬಯಲಾಗಿದೆ.

ಸಂಚಾರ ನಿಯಮ ಉಲ್ಲಂಘಿಸಿದ ವೇಳೆಯಲ್ಲಿ ಇಂಥ ವಾಹನಗಳ ಫೋಟೊ ತೆಗೆದಿಟ್ಟುಕೊಳ್ಳುತ್ತಿರುವ ಸಂಚಾರ ಪೊಲೀಸರು, ನೈಜ ಮಾಲೀಕರ ವಿಳಾಸಕ್ಕೆ ದಂಡದ ನೋಟಿಸ್ ಕಳುಹಿಸುತ್ತಿದ್ದಾರೆ. ನೋಟಿಸ್ಗೆ ಉತ್ತರಿಸುತ್ತಿರುವ ಮಾಲೀಕರು, ‘ನಾವು ಎಂದಿಗೂ ಓಡಾಡದ ರಸ್ತೆಯಲ್ಲಿ ಹೇಗೆ ತಾನೇ ನಿಯಮ ಉಲ್ಲಂಘಿಸಲು ಸಾಧ್ಯ’ ಎಂದು ಪ್ರಶ್ನಿಸುತ್ತಿದ್ದಾರೆ. ಸಂಚಾರ ನಿರ್ವಹಣಾ ಕೇಂದ್ರ (ಟಿಎಂಸಿ) ಹಾಗೂ ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ಅವರಿಗೂ ದೂರು ನೀಡುತ್ತಿದ್ದಾರೆ.

ವೈದ್ಯರ ವಾಹನದ ಫಲಕ ನಕಲು: ವಿಜಯನಗರದ ವೈದ್ಯ ಡಾ. ಜಿ.ಆರ್. ಸಂಜಯ್ ಅವರ ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆಯನ್ನು ನಕಲು ಮಾಡಿ ಯುವಕನೊಬ್ಬ ತನ್ನ ವಾಹನಕ್ಕೆ ಅಳವಡಿಸಿಕೊಂಡಿದ್ದಾನೆ. ಆ ಬಗ್ಗೆ ಸಂಜಯ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

‘ಪ್ರಜಾವಾಣಿ’ ಜೊತೆ ಮಾತನಾಡಿದ ಸಂಜಯ್, ‘ಎರಡೂವರೆ ವರ್ಷದ ಹಿಂದೆ ಹೊಂಡಾ ಆ್ಯಕ್ಟಿವ್ ದ್ವಿಚಕ್ರ ವಾಹನ ಖರೀದಿಸಿದ್ದು, ಕೇವಲ 2,000 ಕಿ.ಮೀ ಓಡಿಸಿದ್ದೇನೆ. ಯಾವುದೇ ನಿಯಮ ಉಲ್ಲಂಘಿಸಿಲ್ಲ. ₹ 100 ದಂಡ ಪಾವತಿಸುವಂತೆ ವರ್ಷದ ಹಿಂದೆ ಮೊದಲ ನೋಟಿಸ್ ಬಂದಿತ್ತು’ ಎಂದು ತಿಳಿಸಿದರು.

‘ಪುರಾವೆ ಕೇಳಿ ಪೊಲೀಸರಿಗೆ ಅರ್ಜಿ ಸಲ್ಲಿಸಿದ್ದೆ. ಸಂಚಾರ ನಿಯಮ ಉಲ್ಲಂಘಿಸಿದ್ದ ಯುವಕನ ಫೋಟೊವನ್ನು ಪೊಲೀಸರು ನೀಡಿದ್ದಾರೆ. ಆತನ ದ್ವಿಚಕ್ರ ವಾಹನದ ಮೇಲೆ ನನ್ನ ವಾಹನದ ನೋಂದಣಿ ಸಂಖ್ಯೆ ಇರುವುದು ಗಮನಕ್ಕೆ ಬಂದಿದ್ದೆ. ಆತನದ್ದು ನಕಲಿ ಫಲಕವೆಂದು ಪೊಲೀಸರಿಗೆ ಹೇಳಿದ್ದೇನೆ’ ಎಂದು ವಿವರಿಸಿದರು.

‘ಹಲವರ ವಾಹನಗಳ ನೋಂದಣಿ ಸಂಖ್ಯೆ ಫಲಕವನ್ನು ನಕಲು ಮಾಡಲಾಗುತ್ತಿದ್ದು, ಈಗಾಗಲೇ ಐದಕ್ಕೂ ಹೆಚ್ಚು ಸವಾರರು ಪೊಲೀಸರಿಗೆ ದೂರು ನೀಡಿದ್ದಾರೆ. ಇದೊಂದು ದೊಡ್ಡ ಜಾಲವೇ ಇರುವಂತೆ ಕಾಣುತ್ತಿದ್ದು, ಸೂಕ್ತ ತನಿಖೆ ನಡೆಸಬೇಕು’ ಎಂದು ಅವರು ಆಗ್ರಹಿಸಿದರು.

ವಾಹನ ಜಪ್ತಿಗೆ ಲುಕ್ಔಟ್: ‘2018ರ ಮಾರ್ಚ್ನಿಂದ ಫ್ರೇಜರ್ ಟೌನ್ ಹಾಗೂ ಸುತ್ತಮುತ್ತ ರಸ್ತೆಗಳಲ್ಲಿ ಆ ಯುವಕ ವಾಹನ ಓಡಿಸಿದ್ದಾನೆ. ಮೇಲಿಂದ ಮೇಲೆ ಸಂಚಾರ ನಿಯಮ ಉಲ್ಲಂಘಿಸಿದ್ದಾನೆ. ಆ ವಾಹನ ಜಪ್ತಿ ಮಾಡುವಂತೆ ಸಂಚಾರ ಪೊಲೀಸರು ಎಲ್ಲ ಠಾಣೆಗಳಿಗೆ ಲುಕ್ಔಟ್ ನೋಟಿಸ್ ಕಳುಹಿಸಿದ್ದಾರೆ’ ಎಂದು ಸಂಜಯ್ ಹೇಳಿದರು.

ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು, ‘ನಿಯಮ ಉಲ್ಲಂಘಿಸಿದರೆ ಸ್ವಯಂಚಾಲಿತವಾಗಿ ದಂಡದ ರಶೀದಿ ಸೃಷ್ಟಿ ಆಗುತ್ತದೆ. ಅದನ್ನೇ ವಾಹನದ ನೋಂದಣಿ ಸಂಖ್ಯೆ ವಿಳಾಸಕ್ಕೆ ಕಳುಹಿಸಲಾಗುತ್ತದೆ. ದಂಡದಿಂದ ತಪ್ಪಿಸಿಕೊಳ್ಳಲು ಕೆಲವರು ನಕಲಿ ನೋಂದಣಿ ಫಲಕ ಬಳಸುತ್ತಿರುವುದು ಗಮನಕ್ಕೆ ಬಂದಿದೆ. ಇಂಥ ವಾಹನಗಳನ್ನು ಪತ್ತೆ ಮಾಡುವ ಕೆಲಸ ನಡೆದಿದೆ’ ಎಂದು ತಿಳಿಸಿದರು.

ಕದ್ದ ವಾಹನಗಳಿಗೆ ನಕಲಿ ಫಲಕ !
ನಗರದಲ್ಲಿ ದಿನಕ್ಕೆ ಕನಿಷ್ಠ 12 ದ್ವಿಚಕ್ರ ವಾಹನಗಳು ಕಳವಾಗುತ್ತಿವೆ. ಅಂಥ ವಾಹನಗಳನ್ನು ಕಳ್ಳರು ನಗರದಲ್ಲೇ ಮಾರಾಟ ಮಾಡುತ್ತಿದ್ದು, ಅವುಗಳಿಗೆ ನಕಲಿ ನೋಂದಣಿ ಸಂಖ್ಯೆ ಫಲಕ ಬಳಸುತ್ತಿರುವ ಅನುಮಾನವಿದೆ.ಕೊಲೆ ಹಾಗೂ ಸುಲಿಗೆಯಂಥ ಕೃತ್ಯಕ್ಕೂ ಅಂಥ ವಾಹನ ಬಳಸಿದರೆ ಯಾರೂ ಹೊಣೆ ಎಂದು ಮಾಲೀಕರು ಪ್ರಶ್ನಿಸುತ್ತಿದ್ದಾರೆ.

‘ನಕಲಿ ಫಲಕದ ಬಗ್ಗೆ ಎರಡು ದೂರು’
‘ನೋಂದಣಿ ಸಂಖ್ಯೆಯ ನಕಲಿ ಫಲಕವನ್ನು ಅಳವಡಿಸಿಕೊಂಡಿರುವ ಬಗ್ಗೆ ಎರಡು ದೂರುಗಳು ಬಂದಿದ್ದು, ಅವುಗಳ ಪರಿಶೀಲನೆ ನಡೆಯುತ್ತಿದೆ. ನಿಯಮ ಉಲ್ಲಂಘನೆ ಮಾಡದಿದ್ದರೂ ನೋಟಿಸ್ ಬಂದಿದ್ದರೆ ಹಾಗೂ ನಕಲಿ ಫಲಕದ ಮಾಹಿತಿ ಇದ್ದರೆ ನನಗೆ ತಿಳಿಸಬಹುದು’ ಎಂದು ರವಿಕಾಂತೇಗೌಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.