ಹವಾಮಾನ ಸಂಬಂಧಿ ತಂತ್ರಜ್ಞಾನ ಮತ್ತು ಫಿನ್‌ಟೆಕ್ ಕ್ಷೇತ್ರಗಳಲ್ಲಿ ವೇಗವಾದ ಬೆಳವಣಿಗೆ ಇದೆ. ಈಗ ಭೂ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ಇದರಿಂದ ಫಿನ್‌ಟೆಕ್ ಕ್ಷೇತ್ರಕ್ಕೆ ಅನುಕೂಲಗಳಾಗಲಿದೆ.ಪ್ರಶಾಂತ್ ಪ್ರಕಾಶ್, ನವೋದ್ಯಮಗಳಿಗೆ ಸಂಬಂಧಿಸಿದ ವಿಷನ್ ಗ್ರೂಪ್ ಅಧ್ಯಕ್ಷ
ಕಳೆದ ವರ್ಷ ಆರ್ಥಿಕ ಕುಸಿತವಿದ್ದ ಕಾರಣದಿಂದ ಜಾಗತಿಕ ಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಶೇಕಡ 9ರಷ್ಟು ಪ್ರಗತಿ ದಾಖಲಿಸಿತ್ತು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯವು ಹೊಂದಿರುವ ನಾಯಕತ್ವವನ್ನು ಉಳಿಸಿಕೊಳ್ಳಲು ಸೂಕ್ತವಾದ ಕಾರ್ಯತಂತ್ರ ರೂಪಿಸಬೇಕು.ಕ್ರಿಸ್ ಗೋಪಾಲಕೃಷ್ಣನ್, ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ವಿಷನ್ ಗ್ರೂಪ್ ಅಧ್ಯಕ್ಷ
ಪ್ರತಿ ವರ್ಷ ಐ.ಟಿ ಕ್ಷೇತ್ರದಲ್ಲಿ ಕೆಲಸ ಮಾಡಲು ಕರ್ನಾಟಕಕ್ಕೆ ಬರುವವರ ಸಂಖ್ಯೆ ನಾಲ್ಕು ಲಕ್ಷದಷ್ಟಿದೆ. ಇದರಿಂದಾಗಿ ರಾಜ್ಯದ ಮೇಲೆ ಹೆಚ್ಚು ಒತ್ತಡವಿದೆ. ಅದಕ್ಕೆ ಪೂರಕವಾಗಿ ಮೂಲಸೌಕರ್ಯ ಅಭಿವೃದ್ಧಿ ಆಗಬೇಕಿದೆ.ರಿಷಾದ್ ಪ್ರೇಮ್‌ಜಿ, ವಿಪ್ರೊ ಕಾರ್ಯಕಾರಿ ಅಧ್ಯಕ್ಷ
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಕರ್ನಾಟಕ ಸರ್ಕಾರವು ನಿರಂತರ ಬೆಂಬಲ ನೀಡುತ್ತಿದೆ. ನವೋದ್ಯಮಗಳ ಬೆಂಬಲಕ್ಕೆ ವಿಶೇಷ ಸೌಲಭ್ಯ ನೀಡಲಾಗುತ್ತಿದೆ.ಅರವಿಂದಕುಮಾರ್, ಸಾಫ್ಟ್‌ವೇರ್ ಪಾರ್ಕ್ ಆಫ್ ಇಂಡಿಯಾದ ಮಹಾನಿರ್ದೇಶಕ
ಉದ್ಯಮ ಮತ್ತು ಸರ್ಕಾರದ ನಡುವಣ ಉತ್ತಮ ಸಂಬಂಧವೇ ಕರ್ನಾಟಕವು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಎತ್ತರಕ್ಕೆ ಬೆಳೆಯಲು ಕಾರಣ. ಕರ್ನಾಟಕವು ಜೈವಿಕ ತಂತ್ರಜ್ಞಾನ ಕ್ಷೇತ್ರದ ಬೃಹತ್ ಉದ್ದಿಮೆಗಳು ಹಾಗೂ ನವೋದ್ಯಮಗಳ ತವರಾಗಿದೆ. ಸರ್ಕಾರವು ಆರಂಭದ ಹಂತದಲ್ಲಿ ಮಾಡಿದ್ದ ಹೂಡಿಕೆ ಈಗ ಫಲ ನೀಡುತ್ತಿದೆ.ಕಿರಣ್ ಮಜುಂದಾರ್ ಷಾ, ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಷನ್ ಗ್ರೂಪ್ ಅಧ್ಯಕ್ಷೆ
ಭಾರತವು ಬಳಕೆದಾರ ಕೇಂದ್ರಿತ ಆರ್ಥಿಕತೆಯಿಂದ ಉತ್ಪಾದನಾ ಕೇಂದ್ರಿತ ಆರ್ಥಿಕತೆಯತ್ತ ಸಾಗುತ್ತಿದೆ. ಈ ದಿಸೆಯಲ್ಲಿ ಸಾಮರ್ಥ್ಯ ವೃದ್ಧಿ ಸೇರಿದಂತೆ ಹಲವು ಸವಾಲುಗಳಿವೆ. ವಿಶೇಷ ಉತ್ತೇಜನಗಳನ್ನು ನೀಡುವ ಮೂಲಕ ಉತ್ಪಾದನಾ ಕ್ಷೇತ್ರವನ್ನು ಸರ್ಕಾರವು ಬೆಂಬಲಿಸಬೇಕು.ನಿವೃತಿ ರೈ , ವ್ಯವಸ್ಥಾಪಕ ನಿರ್ದೇಶಕಿ, ಇನ್‌ವೆಸ್ಟ್ ಇಂಡಿಯಾ
ಕರ್ನಾಟಕದಲ್ಲಿ ಉದ್ಯಮಸ್ನೇಹಿ ಆಡಳಿತವಿದೆ. ಅಧಿಕಾರಶಾಹಿಯಲ್ಲಿ ತೊಡಕುಗಳಿಲ್ಲ. ಇದರಿಂದಾಗಿ ಹೂಡಿಕೆದಾರರು ಕರ್ನಾಟಕದಲ್ಲಿ ಕೆಲಸ ಮಾಡಲು ಬಯಸುತ್ತಾರೆ.ಮಾರ್ಕ್ ಪೇಪರ್‌ಮಾಸ್ಟರ್, ಕಾರ್ಯಕಾರಿ ಉಪಾಧ್ಯಕ್ಷ ಎಎಂಡಿ ಸಮೂಹ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.