ಬೆಸ್ಕಾಂ ಕೇಂದ್ರ ಕಚೇರಿಯಲ್ಲಿರುವ ಘಟಕದಲ್ಲಿ ಕಾರನ್ನು ಚಾರ್ಜ್ ಮಾಡುತ್ತಿರುವುದು (ಸಂಗ್ರಹ ಚಿತ್ರ)
ಇವಿ ಚಾರ್ಜಿಂಗ್ ಕೇಂದ್ರ
ಸಾಂದರ್ಭಿಕ ಚಿತ್ರ
ಇವಿ ಚಾರ್ಜಿಂಗ್‌ನಲ್ಲಿನ ಹೊಸ ಆವಿಷ್ಕಾರಗಳನ್ನು ಬಳಸಿಕೊಂಡು ಹೈವೇಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸುವ ಪ್ರಯತ್ನಗಳು ನಡೆಯುತ್ತಿವೆ. ಚಾರ್ಜಿಂಗ್ ಕೇಂದ್ರಗಳ ಜಾಲ ವಿಸ್ತರಿಸಿ ಇನ್ನಷ್ಟು ಉತ್ತಮಗೊಳಿಸುತ್ತೇವೆ.
ಮಹಾಂತೇಶ್ ಬೀಳಗಿ ವ್ಯವಸ್ಥಾಪಕ ನಿರ್ದೇಶಕ ಬೆಸ್ಕಾಂ
ಪ್ರದೀಪ್ ಸಾಗರ
ಒಂದು ವರ್ಷದಿಂದ ಇವಿ ಕಾರು ಬಳಸುತ್ತಿದ್ದೇನೆ. ಬೆಂಗಳೂರಿನಾದ್ಯಂತ ಸಾಕಷ್ಟು ಚಾರ್ಜಿಂಗ್ ಕೇಂದ್ರಗಳಿವೆ. ನನಗೆ ಒಂದೂ ದಿನವೂ ಚಾರ್ಜಿಂಗ್‌ಗೆ ತೊಂದರೆಯಾಗಿಲ್ಲ. ಚಾರ್ಜಿಂಗ್ ವ್ಯವಸ್ಥೆ ತುಂಬಾ ಚೆನ್ನಾಗಿದೆ. ಸುಮಾರು 1 ಗಂಟೆಯೊಳಗೆ ಪೂರ್ಣ ಚಾರ್ಜ್ ಆಗುತ್ತದೆ. 400 ಕಿ.ಮೀ ಧಾರಾಳವಾಗಿ ಓಡಾಡುತ್ತೇನೆ. ಹೊರಗಡೆ ಹೋಗುವಾಗ ಎಲ್ಲೆಲ್ಲಿ ಚಾರ್ಜಿಂಗ್ ಮಾಡಬಹುದು ಎಂಬುದನ್ನು ತಿಳಿದುಕೊಂಡು ಹೋಗುತ್ತೇನೆ.
ಪ್ರದೀಪ್ ಸಾಗರ ಸಾಫ್ಟ್‌ವೇರ್ ಉದ್ಯೋಗಿ
‘ಇ.ವಿ ಮಿತ್ರ’ ಆ್ಯಪ್
ಇ.ವಿ ಬಳಕೆದಾರರಿಗೆ ಸುಗಮ ಚಾರ್ಜಿಂಗ್ ಸೌಲಭ್ಯಕ್ಕಾಗಿ, ಬೆಸ್ಕಾಂ ‘ಇ.ವಿ. ಮಿತ್ರ’ ಎಂಬ ಮೊಬೈಲ್ ಅಪ್ಲಿಕೇಷನ್ ಪರಿಚಯಿಸಿದೆ. ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಲಭ್ಯವಿರುವ ಈ ಆ್ಯಪ್, ಸಮೀಪದ ಚಾರ್ಜಿಂಗ್ ಕೇಂದ್ರದ ಮಾಹಿತಿ ನೀಡುತ್ತದೆ. ಚಾರ್ಜಿಂಗ್ ಪ್ರಕ್ರಿಯೆ, ಬುಕ್ಕಿಂಗ್ ವಿವರ, ಚಾರ್ಚಿಂಗ್ ಸ್ಟೇಷನ್‌ಗಳಲ್ಲಿರುವ ಸೌಕರ್ಯಗಳು ಮತ್ತು ಚಾರ್ಜಿಂಗ್ ಕಾಯ್ದಿರಿಸುವ ಸೌಲಭ್ಯ ಹೊಂದಿದೆ. ಕನ್ನಡ, ಹಿಂದಿ, ಇಂಗ್ಲಿಷ್ ಸೇರಿ 11 ಭಾಷೆಗಳಲ್ಲಿ ಇ.ವಿ ಚಾರ್ಜಿಂಗ್ ಮಾಹಿತಿ ಲಭ್ಯವಿದೆ. ಆ್ಯಪ್‌ನಿಂದ ಯುಪಿಐ ಮೂಲಕ ಪಾವತಿ ಮಾಡಬಹುದು. https://onelink.to/evmithra ಮೂಲಕ ಆ್ಯಪ್ ಡೌನ್‌ಲೋಡ್ ಮಾಡಿ, ಇನ್‌ಸ್ಟಾಲ್ ಮಾಡಿಕೊಂಡು ಬಳಸಬಹುದು.