ಬೆಂಗಳೂರು: ನಗರದ ಗಾರ್ಮೆಂಟ್ಸ್ ಕಾರ್ಖಾನೆಗಳ ಮಹಿಳಾ ನೌಕರರಿಗೆ ‘ವನಿತಾ ಸಂಗಾತಿ’ ಯೋಜನೆಯಡಿ ಜ.22ರಿಂದ ಮಾಸಿಕ ಉಚಿತ ಬಸ್ ಪಾಸ್ ವಿತರಣೆ ಮಾಡಲಾಗುವುದು ಎಂದು ಬಿಎಂಟಿಸಿ ತಿಳಿಸಿದೆ.

ಕಾರ್ಖಾನೆಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಕಾರ್ಮಿಕರಿದ್ದು, ಅದರಲ್ಲಿ ಶೇ 80ರಷ್ಟು ಮಹಿಳಾ ಕಾರ್ಮಿಕರೇ ಇದ್ದಾರೆ. ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಅವರಿಗೆ ಪಾಸ್ ವಿತರಿಸಲಾಗುತ್ತಿದೆ. ಮಹಿಳಾ ನೌಕರರು ಕಾರ್ಖಾನೆಯ ಮಾಲೀಕರಿಗೆ ಮನವಿ ಸಲ್ಲಿಸಬೇಕು. ಕಾರ್ಮಿಕರ ಪಾಲಿನ ಶೇ 40ರಷ್ಟು ಮೊತ್ತ ಪಡೆದು ಪಾಸ್ ವಿತರಿಸಲಾಗುವುದು.

ಕಾರ್ಖಾನೆಗಳ ಮಾಲೀಕರು ಕಾರ್ಮಿಕ ಕಲ್ಯಾಣ ಮಂಡಳಿಗೆ ಇ–ಮೇಲ್ (ವಿಳಾಸ: welfarecommissioner123@gmail.com) ಕಳುಹಿಸಬೇಕು. ಕಾರ್ಮಿಕ ಮಂಡಳಿಯಿಂದ ಪರಿಶೀಲನೆಯಾಗಿ ಬರುವ ಕಾರ್ಮಿಕರಿಗೆ ಕೆಂಪೇಗೌಡ ಬಸ್ ನಿಲ್ದಾಣದ ಕೌಂಟರ್ನಲ್ಲಿ ಪಾಸ್ ವಿತರಿಸಲಾಗುವುದು ಎಂದು ಬಿಎಂಟಿಸಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.