ಬೆಂಗಳೂರು: ‘ದೇಶದಲ್ಲಿ ಇಂದು ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಕಳವಳ ವ್ಯಕ್ತಪಡಿಸಿದರು.

ಸಮಾಜಮುಖಿ ಪ್ರಕಾಶನ ಭಾನುವಾರ ಆಯೋಜಿಸಿದ್ದ ಚಂದ್ರಕಾಂತ ವಡ್ಡು ಅವರ ‘ಸಮಕಾಲೀನ’ ಅಂಕಣ ಬರಹಗಳ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಬಿಜೆಪಿ ಸರ್ಕಾರ ಧರ್ಮಗಳ ಮಧ್ಯೆ ವಿಷದ ಬೀಜವನ್ನು ಬಿತ್ತುವ ಅಪಾಯಕಾರಿ ಕೆಲಸ ಮಾಡುತ್ತಿದೆ. 2023ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದಂತೆ 2024ರ ಲೋಕಸಭೆ ಚುನಾವಣೆಯಲ್ಲೂ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯನ್ನು ಸೋಲಿಸಬೇಕು. ಇದಕ್ಕೆ ಸುಧೀರ್ಘವಾದ ಸಾಂಸ್ಕೃತಿಕ ಹೋರಾಟ ಮಾಡಬೇಕು’ ಎಂದು ಹೇಳಿದರು.

‘ಸಮಕಾಲೀನ ರಾಜಕಾರಣದ’ ಬಗ್ಗೆ ಮಾತನಾಡಿದ ಅಜೀಂ ಪ್ರೇಮ್ ಜೀ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎ. ನಾರಾಯಣ್, ‘ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಧರ್ಮ ಆಧಾರಿತ ರಾಷ್ಟ್ರ ನಿರ್ಮಿಸುವ ಕೆಲವರ ಪ್ರಯತ್ನಕ್ಕೆ ಇಂದು ಫಲ ಸಿಗುತ್ತಿದೆ. 1950ರಲ್ಲಿ ಧರ್ಮ ಆಧಾರಿತ ರಾಷ್ಟ್ರೀಯತೆಯನ್ನು ತಿರಸ್ಕರಿಸಿದ್ದ ಇಲ್ಲಿನ ಶೇ 99ರಷ್ಟು ಜನ ಇಂದು ಅದನ್ನು ಸ್ವೀಕರಿಸುತ್ತಿದ್ದಾರೆ. ವಿವಿಧತೆಯಿಂದ ಕೂಡಿರುವ ನಮ್ಮ ದೇಶದಲ್ಲಿ ಒಂದು ಸಿದ್ಧಾಂತದ ಕೆಳಗೆ, ಒಂದು ವರ್ಗ ಅಥವಾ ಸಂಪ್ರದಾಯ, ನಂಬಿಕೆಗಳ ಅನುಗುಣವಾಗಿ ದೇಶ ನಿರ್ಮಿಸುವುದಕ್ಕೆ ಸಾಧ್ಯವಿಲ್ಲ’ ಎಂದು ತಿಳಿಸಿದರು.

‘ಒಂದು ದೇಶ ಒಂದು ಚುನಾವಣೆ ಹೆಸರಿನಲ್ಲಿ ರಾಜ್ಯಗಳ ಅಸ್ತಿತ್ವ ಮತ್ತು ಪ್ರಾತಿನಿಧ್ಯವನ್ನು ದಮನಗೊಳಿಸಲಾಗುತ್ತಿದೆ’ ಎಂದರು

ಪತ್ರಕರ್ತ ಬಿ.ಎಂ. ಹನೀಫ್ ಅವರು ‘ಸಮಕಾಲೀನ ಮಾಧ್ಯಮ’ದ ಕುರಿತು ಮಾತನಾಡಿದರು. ತುಮಕೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಗೀತಾ ವಸಂತ ಪುಸ್ತಕ ಪರಿಚಯಿಸಿದರು. ಪತ್ರಕರ್ತ ಯತಿರಾಜ್ ಬ್ಯಾಲಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ಟ ಇದ್ದರು.

ಪುಸ್ತಕ ಪರಿಚಯ

ಪುಸ್ತಕ; ‘ಸಮಕಾಲೀನ’ ಅಂಕಣ ಬರಹಗಳ ಸಂಕಲನ

ಲೇಖಕರು; ಚಂದ್ರಕಾಂತ ವಡ್ಡು ಪ್ರ

ಕಾಶನ; ಸಮಾಜಮುಖಿ ಪ್ರಕಾಶನ

ಬೆಲೆ; ₹120 ಪುಟಗಳ ಸಂಖ್ಯೆ;119

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.