ಬೆಂಗಳೂರು: ಬಹುಮಹಡಿ ಕಟ್ಟಡದ ಒಂದನೇ ಮಹಡಿಯಿಂದ ಆಯತಪ್ಪಿ ಬಿದ್ದು ಮೂರು ವರ್ಷದ ಮಗು ರಿಯಾನ್ ಮೃತಪಟ್ಟಿದ್ದು, ಈ ಬಗ್ಗೆ ಮಾರತ್ತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮೃತ ರಿಯಾನ್, ನೇಪಾಳದ ಕಿರಣ್ ಸೌದ್ ಹಾಗೂ ವಿಮಲಾ ದಂಪತಿ ಮಗ. ಜುಲೈ 3ರಂದು ಆಟವಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿ ಮಗು ತೀವ್ರವಾಗಿ ಗಾಯಗೊಂಡಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ರಿಯಾನ್ ಅಸುನೀಗಿದ್ದಾನೆ’ ಎಂದು ಮಾರತ್ತಹಳ್ಳಿ ಪೊಲೀಸರು ಹೇಳಿದರು.

‘ಐದು ವರ್ಷಗಳ ಹಿಂದೆ ನೇಪಾಳದಿಂದ ನಗರಕ್ಕೆ ಬಂದಿದ್ದ ಕಿರಣ್ ದಂಪತಿ ಪೇಯಿಂಗ್ ಗೆಸ್ಟ್ ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅದೇ ಕಟ್ಟಡದ ನೆಲಮಹಡಿ ಮನೆಯಲ್ಲಿ ಉಳಿದುಕೊಂಡಿದ್ದರು.’

‘ಕೆಲಸದಲ್ಲಿ ನಿರತರಾಗಿದ್ದ ದಂಪತಿಯು ಮಗುವಿಗೆ ಮೊಬೈಲ್ ಕೊಟ್ಟು ಒಂದನೇ ಮಹಡಿಯಲ್ಲಿ ಕೂರಿಸಿದ್ದರು. ಅದೇ ಸಂದರ್ಭದಲ್ಲೇ ಮೊಬೈಲ್ಗೆ ಕರೆ ಬಂದಿತ್ತು. ಮಗುವು ತಂದೆ ಬಳಿ ಹೋಗಿ ಮೊಬೈಲ್ ಕೊಟ್ಟು, ವಾಪಸು ಬಂದು ಮಹಡಿಯಲ್ಲಿ ಕುಳಿತು ಆಟವಾಡುತ್ತಿತ್ತು. ಅವಾಗಲೇ ಆಯತಪ್ಪಿ ಬಿದ್ದಿತ್ತು’ ಎಂದೂ ತಿಳಿಸಿದರು.

‘ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದ ಆರೋಪದಡಿ ಕಟ್ಟಡದ ಮಾಲೀಕನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದೂ ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.