ಬೆಂಗಳೂರು: ವೈಟ್‌ಫೀಲ್ಡ್‌ನಿಂದ ಭಾನುವಾರ ಮಧ್ಯಾಹ್ನ ನಾಪತ್ತೆಯಾಗಿದ್ದ ಬಾಲಕ ಪರಿಣವ್ (12) ಹೈದರಾಬಾದ್‌ನಲ್ಲಿ ಬುಧವಾರ ಮುಂಜಾನೆ ಪತ್ತೆಯಾಗಿದ್ದಾನೆ.

ಹೈದರಾಬಾದ್‌ನ ನಾಂಪಲ್ಲಿ ಮೆಟ್ರೊ ನಿಲ್ದಾಣದಲ್ಲಿ ಪತ್ತೆಯಾಗಿದ್ದು ಅಲ್ಲಿನ ಪೊಲೀಸರು ಬಾಲಕನನ್ನು ರಕ್ಷಿಸಿ ವೈಟ್‌ಫೀಲ್ಡ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿಜಯನಗರದ ಸುಖೇಶ್ - ನಿವೇದಿತಾ ದಂಪತಿ ಪುತ್ರ ಪರಿಣವ್. ಗುಂಜೂರಿನ ಡೆನ್ ಅಕಾಡೆಮಿ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದ.

ಭಾನುವಾರ ಮಧ್ಯಾಹ್ನ 12.15ರ ಸುಮಾರಿಗೆ ನಾಪತ್ತೆ ಆಗಿದ್ದ. ವೈಟ್ಫೀಲ್ಡ್ನ ಅಲೆನ್ ಟ್ಯೂಷನ್ ಸೆಂಟರ್‌ಗೆ ಮಗನನ್ನು ಕಳುಹಿಸಿ, ತಂದೆ ಮನೆಗೆ ಬಂದಿದ್ದರು. ಮಧ್ಯಾಹ್ನ ಕರೆತರಲು ಹೋಗುವುದು ತಡವಾಗಿದ್ದರಿಂದ ನಾಪತ್ತೆ ಆಗಿದ್ದ ಎನ್ನಲಾಗಿದೆ.

ಟ್ಯೂಷನ್ ಸೆಂಟರ್ನಿಂದ ಮಾರತ್ತಹಳ್ಳಿವರೆಗೆ ಬಾಲಕ ನಡೆದುಬಂದಿದ್ದು, ನಂತರ ಬಿಎಂಟಿಸಿ ಬಸ್ ಹತ್ತಿದ್ದು ಸಿಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ತಂದೆ ನೀಡಿದ ದೂರು ಆಧರಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದ ವೈಟ್‌ಫೀಲ್ಡ್ ಠಾಣೆ ಪೊಲೀಸರು, ನಾಲ್ಕು ತಂಡ ರಚಿಸಿ ಬಾಲಕನ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದರು. ಬಾಲಕ ರೈಲಿನಲ್ಲಿ ಹೈದರಾಬಾದ್‌ಗೆ ತೆರಳಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಬಾಲಕನನ್ನು ಕರೆತರಲು ಪೋಷಕರು ಹೈದರಾಬಾದ್‌ಗೆ ತೆರಳಿದ್ದಾರೆ.
.ಮುಂಬೈನ Apple BKC ಸನಿಹವೇ SAMSUNG ಹೊಸ ಸ್ಟೋರ್! ಹೊರದೇಶದಲ್ಲಿ ಇದೇ ಮೊದಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.