ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಪ್ರಯಾಣಿಕರ ಸ್ನೇಹಿ ‘ಸ್ಮಾರ್ಟ್‌ ತಂಗುದಾಣ’

ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡುವ ಉದ್ದೇಶದಿಂದ ಬಸ್‌ ತಂಗುದಾಣ ನಿರ್ಮಾಣ
Published : 8 ಅಕ್ಟೋಬರ್ 2024, 0:30 IST
Last Updated : 8 ಅಕ್ಟೋಬರ್ 2024, 0:30 IST
ಫಾಲೋ ಮಾಡಿ
Comments
ನಗರದ ನೃಪತುಂಗ ರಸ್ತೆಯಲ್ಲಿರುವ ಸ್ಮಾರ್ಟ್ ಬಸ್ ತಂಗುದಾಣದಲ್ಲಿ ಕುಳಿತಿರುವ ಪ್ರಯಾಣಿಕರು 
ಪ್ರಜಾವಾಣಿ ಚಿತ್ರ: ರಂಜು ಪಿ.
ನಗರದ ನೃಪತುಂಗ ರಸ್ತೆಯಲ್ಲಿರುವ ಸ್ಮಾರ್ಟ್ ಬಸ್ ತಂಗುದಾಣದಲ್ಲಿ ಕುಳಿತಿರುವ ಪ್ರಯಾಣಿಕರು  ಪ್ರಜಾವಾಣಿ ಚಿತ್ರ: ರಂಜು ಪಿ.
ಸ್ಮಾರ್ಟ್ ಬಸ್ ತಂಗುದಾಣದಲ್ಲಿರುವ ಪ್ಯಾನಿಕ್‌ ಬಟನ್‌

ಸ್ಮಾರ್ಟ್ ಬಸ್ ತಂಗುದಾಣದಲ್ಲಿರುವ ಪ್ಯಾನಿಕ್‌ ಬಟನ್‌

ಪ್ರಜಾವಾಣಿ ಚಿತ್ರ: ರಂಜು ಪಿ.

ಸ್ಮಾರ್ಟ್ ಬಸ್ ತಂಗುದಾಣದಲ್ಲಿರುವ ಸ್ಯಾನಿಟರಿ ವೆಂಡಿಂಗ್‌ ಮೆಷಿನ್

ಸ್ಮಾರ್ಟ್ ಬಸ್ ತಂಗುದಾಣದಲ್ಲಿರುವ ಸ್ಯಾನಿಟರಿ ವೆಂಡಿಂಗ್‌ ಮೆಷಿನ್

ಪ್ರಜಾವಾಣಿ ಚಿತ್ರ: ರಂಜು ಪಿ.

ಸ್ಮಾರ್ಟ್ ಬಸ್ ತಂಗುದಾಣದಲ್ಲಿ ಪ್ರಯಾಣಿಕರೊಬ್ಬರು ಮೊಬೈಲ್‌ ಚಾರ್ಜಿಂಗ್‌ ಮಾಡಿಕೊಳ್ಳುತ್ತಿರುವುದು

ಸ್ಮಾರ್ಟ್ ಬಸ್ ತಂಗುದಾಣದಲ್ಲಿ ಪ್ರಯಾಣಿಕರೊಬ್ಬರು ಮೊಬೈಲ್‌ ಚಾರ್ಜಿಂಗ್‌ ಮಾಡಿಕೊಳ್ಳುತ್ತಿರುವುದು

ಪ್ರಜಾವಾಣಿ ಚಿತ್ರ: ರಂಜು ಪಿ.

ಸೇಪಿಯನ್ಸ್‌ ಹಾಗೂ ಶಿಲ್ಪಾ ಫೌಂಡೇಷನ್‌ ನಿರ್ಮಿಸಿರುವ ಸ್ಮಾರ್ಟ್‌ ತಂಗುದಾಣವು ಹಲವಾರು ಸೌಲಭ್ಯಗಳಿಂದ ಕೂಡಿದ್ದು ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಇದನ್ನು ಸಾರ್ವಜನಿಕರು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು.
-ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ
ಮಹಿಳೆಯರು ಮತ್ತು ಮಕ್ಕಳು ಸಾರ್ವಜನಿಕ ಪ್ರದೇಶಗಳಲ್ಲಿ ಅದರಲ್ಲೂ ಬಸ್‌ ತಂಗುದಾಣಗಳಲ್ಲಿ ನಿರ್ಭೀತಿಯಿಂದ ಇರಬೇಕು ಎಂಬ ಉದ್ದೇಶದಿಂದ ಸ್ಮಾರ್ಟ್‌ ತಂಗುದಾಣವನ್ನು ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವಿಡಿಯೊಗಳನ್ನು ಪ್ರದರ್ಶಿಸಲು ಬಿಬಿಎಂಪಿ ಜೊತೆಗೆ ಮಾತುಕತೆ ನಡೆಸುತ್ತೇವೆ.
-ಅಚ್ಚುತ್‌ ಗೌಡ, ಶಿಲ್ಪಾ ಫೌಂಡೇಷನ್‌ನ ಸಂಸ್ಥಾಪಕರು
ಸೇಪಿಯನ್ಸ್‌ ಸಂಸ್ಥೆಯು ತನ್ನ ಸಿಎಸ್‌ಆರ್ ನಿಧಿ ಬಳಸಿಕೊಂಡು ವಿನೂತನ ಶೈಲಿಯ ಸ್ಮಾರ್ಟ್‌ ತಂಗುದಾಣವನ್ನು ನಿರ್ಮಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿದೆ. ಹೊಸ ತಲೆಮಾರಿನವರಿಗೆ ಹೊಸತನವನ್ನು ನೀಡುವ ಉದ್ದೇಶದಿಂದ ಸ್ಮಾರ್ಟ್‌ ತಂಗುದಾಣ ನಿರ್ಮಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡರೆ ಈ ಯೋಜನೆ ಯಶಸ್ವಿಯಾಗಲಿದೆ.
-ಸುರಜಿತ್ ಬಸು, ಸೇಪಿಯನ್ಸ್‌ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕರು ಹಾಗೂ ಸೇಪಿಯನ್ಸ್‌ ವಿಶ್ವವಿದ್ಯಾಲಯದ ಮುಖ್ಯಸ್ಥ
ನೃಪತುಂಗ ರಸ್ತೆಯಲ್ಲಿರುವ ತಂಗುದಾಣದಲ್ಲಿ ರಾತ್ರಿ ಸಮಯದಲ್ಲಿ ಹೆಚ್ಚು ಪ್ರಯಾಣಿಕರು ಇರುವುದಿಲ್ಲ. ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಪ್ಯಾನಿಕ್‌ ಬಟನ್‌ ಮತ್ತು ಸಿಸಿಟಿವಿ ಕ್ಯಾಮೆರಾ ಅಳವಡಿಸಿರುವುದು ಶ್ಲಾಘನೀಯ.
-ಗಗನಶ್ರೀ ಎಂ.ಟೆಕ್‌ ವಿದ್ಯಾರ್ಥಿನಿ
ನಗರ ಪ್ರದೇಶಗಳಲ್ಲಿ ಇತ್ತೀಚಿಗೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಬಸ್‌ ತಂಗುದಾಣಗಳಲ್ಲಿ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಿರುವುದು ಒಳ್ಳೆಯ ಕ್ರಮ. ಇಂತಹ ತಂಗುದಾಣಗಳ ಸಂಖ್ಯೆ ಹೆಚ್ಚಾಗಲಿ.
-ಅನಿತಾ ಭಾರದ್ವಾಜ್ ಗೃಹಿಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT