ಬೆಂಗಳೂರು: ಪ್ರತ್ಯೇಕ ಬಸ್ ಪಥ ನಿರ್ಮಿಸಬೇಕು. ಸಾರ್ವಜನಿಕ ಸಾರಿಗೆಯಲ್ಲಿ ಮೂಲಸೌಕರ್ಯ ಸುಧಾರಣೆ ಮಾಡಬೇಕು ಎಂದು ಆಗ್ರಹಿಸಿ ನಗರದ ಮಹಿಳಾ ಗಾರ್ಮೆಂಟ್ ನೌಕರರ ಸಮುದಾಯ ಮತ್ತು ಗ್ರೀನ್‌ಪೀಸ್ ಇಂಡಿಯಾ ಪದಾಧಿಕಾರಿಗಳು ನಗರ ಭೂ ಸಾರಿಗೆ ನಿರ್ದೇಶನಾಲಯಕ್ಕೆ ಮನವಿ ಸಲ್ಲಿಸಿದೆ.

ನಗರದಲ್ಲಿ 11 ಬಸ್ ಆದ್ಯತಾ ಪಥಗಳನ್ನು ನಿರ್ಮಿಸಬೇಕು. ಹೊರವರ್ತುಲ ರಸ್ತೆಯಲ್ಲಿದ್ದ ಬಸ್ ಆದ್ಯತಾ ಪಥವನ್ನು ಮತ್ತೆ ಆರಂಭಿಸಬೇಕು ಎಂಬ ಬೇಡಿಕೆಗಳೊಂದಿಗೆ 28,995 ಸಾರ್ವಜನಿಕರ ಸಹಿಯುಳ್ಳ ಅಹವಾಲು ಸಲ್ಲಿಸಲಾಗಿದೆ.

‘ನಾಗಸಂದ್ರದಿಂದ ಕೆ.ಆರ್.ಮಾರುಕಟ್ಟೆಯಂತಹ ಸ್ಥಳಗಳಿಗೆ ತಲುಪಲು ಬಸ್ಸಿನಲ್ಲಿ ಎರಡು ಗಂಟೆ ಬೇಕಾಗಿದೆ. ಅದೇ ಪ್ರತ್ಯೇಕ ಬಸ್ ಮಾರ್ಗ ಮೀಸಲಿಟ್ಟರೆ ಕಡಿಮೆ ಸಮಯದಲ್ಲಿ ಈ ಸ್ಥಳಗಳನ್ನು ತಲುಪಬಹುದು. ಆಗ ನಾವು ಮೆಟ್ರೊ ಬದಲು, ಬಸ್ಸನ್ನೇ ಬಳಸಬಹುದು. ಪ್ರಯಾಣದ ವೆಚ್ಚವನ್ನು ಉಳಿಸಬಹುದು’ ಎಂದು ತುಮಕೂರು ರಸ್ತೆಯ ಗಾರ್ಮೆಂಟ್ಸ್ ಕಾರ್ಖಾನೆಯ ಜಯಮಾಲಾ ಅಭಿಪ್ರಾಯಪಟ್ಟರು.

ಹಿಂದೆ ಹೊರವರ್ತುಲ ರಸ್ತೆಯಲ್ಲಿ ಪ್ರತ್ಯೇಕ ಬಸ್ ಪಥ ನಿರ್ಮಿಸಿದಾಗ ಪ್ರಯಾಣಿಕರ ಸಂಖ್ಯೆ ತಿಂಗಳಿಗೆ 3,700ರಷ್ಟು ಹೆಚ್ಚಳವಾಗಿತ್ತು. ಆನಂತರ ಪ್ರತ್ಯೇಕ ಪಥ ತೆಗೆದು ಹಾಕಲಾಗಿದೆ. ಶಕ್ತಿ ಯೋಜನೆ ಜಾರಿಯಾದ ಮೇಲೆ ಮಹಿಳಾ ಪ್ರಯಾಣಿಕರ ಸಂಖ್ಯೆ ಭಾರಿ ಹೆಚ್ಚಳವಾಗಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಪ್ರತ್ಯೇಕ ಪಥ ಮಾಡಬೇಕು. 15,000 ಹೆಚ್ಚುವರಿ ಬಸ್ ಕಾರ್ಯಾಚರಣೆಗೊಳಿಸಬೇಕು. ಸುವ್ಯವಸ್ಥಿತ, ಸುರಕ್ಷಿತ ಸಂಪರ್ಕ ಸಾರಿಗೆ ನೀಡಬೇಕು ಎಂದು ಗ್ರೀನ್‌ಪೀಸ್ ಇಂಡಿಯಾದ ಕ್ಯಾಂಪೇನರ್ ಶರತ್ ಎಂ.ಎಸ್. ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.