ಬೆಂಗಳೂರು: ನಗರದ ಬಹುತೇಕ ಎಂಜಿನಿಯರಿಂಗ್ ಕಾಲೇಜುಗಳ ಕ್ಯಾಂಪಸ್ಗಳು ತಮ್ಮ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶ ದೊರಕಿಸುವಲ್ಲಿ ಯಶಸ್ಸು ಕಾಣುತ್ತಿದ್ದು,ಕೋವಿಡ್ ಪೂರ್ವದ ಸ್ಥಿತಿಗೆ ತಲುಪುತ್ತಿವೆ.

ಹಲವು ಕಂಪನಿಗಳು ಈ ವರ್ಷ ಆನ್ಲೈನ್ ನೇಮಕಾತಿ ವಿಧಾನಕ್ಕೆ ಅಂಟಿಕೊಂಡಿದ್ದರೂ, 2022ರ ಬ್ಯಾಚ್ ಪದವೀಧರರು ತಮ್ಮ ಹಿಂದಿನ ವಿದ್ಯಾರ್ಥಿಗಳಿಗಿಂತಲೂ ಉತ್ತಮ ಕೊಡುಗೆಗಳನ್ನು ಪಡೆದಿದ್ದಾರೆ. ಹೆಚ್ಚಿನ ಪ್ಯಾಕೇಜ್ಗಳು ವಾರ್ಷಿಕ ಸರಾಸರಿ ₹ 14 ಲಕ್ಷದಿಂದ ₹ 65 ಲಕ್ಷದವರೆಗೆ ಇದೆ ಎಂದು ಕ್ಯಾಂಪಸ್ ಆಯ್ಕೆ ಪೂರ್ಣಗೊಳಿಸಿದ ಕಾಲೇಜುಗಳ ಆಡಳಿತ ಮಂಡಳಿಗಳು ಹೇಳಿಕೊಂಡಿವೆ.

ಕೆಲವು ಕಾಲೇಜುಗಳು ದಾಖಲೆ ನಿಯೋಜನೆಗೂ ಸಾಕ್ಷಿಯಾಗಿವೆ. ಶತಮಾನದಷ್ಟು ಹಳೆಯದಾದ ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ 217 ಹೆಚ್ಚುವರಿ ವಿದ್ಯಾರ್ಥಿಗಳು ಉದ್ಯೋಗದ ಕೊಡುಗೆಗಳನ್ನು ಪಡೆದಿದ್ದಾರೆ. 2021–22ನೇ ಸಾಲಿನಲ್ಲಿ 435 ವಿದ್ಯಾರ್ಥಿಗಳು ಅವಕಾಶ ಪಡೆದಿದ್ದರು. ಈ ಬಾರಿ 652 ವಿದ್ಯಾರ್ಥಿಗಳಿಗೆ ಅವಕಾಶ ದೊರೆತಿದೆ.ಇದು ಆರು ವರ್ಷಗಳಲ್ಲೇ ದಾಖಲೆ ಎಂದು ಕಾಲೇಜಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಿಇಎಸ್ ವಿಶ್ವವಿದ್ಯಾಲಯದ ಕ್ಯಾಂಪಸ್ಗೆ ಭೇಟಿ ನೀಡಿದ ಕಂಪನಿಗಳ ಸಂಖ್ಯೆ ಶೇ 42ರಷ್ಟು ಹೆಚ್ಚಾಗಿದೆ. 1,315 ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ. ಅವರಲ್ಲಿ ಹಲವರು ಒಂದಕ್ಕಿಂತ ಹೆಚ್ಚು ಅವಕಾಶಗಳನ್ನು ಪಡೆದಿದ್ದಾರೆ.ದಯಾನಂದ ಸಾಗರ್ ಕಾಲೇಜಿನ ವಿದ್ಯಾರ್ಥಿಗಳು ಶೇ 20ರಷ್ಟು ವೇತನ ಹೆಚ್ಚಳದ ಉದ್ಯೋಗ ಪಡೆದಿದ್ದಾರೆ.

ವಿವಿಧ ಸ್ಥಾಪಿತ ಕೌಶಲ ಹೊಂದಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಹೆಚ್ಚಿನ ಕಂಪನಿಗಳು ಪ್ರತಿಭಾವಂತರಿಗೆ ಮಣೆ ಹಾಕುತ್ತಿವೆ. ಯಂತ್ರ ಕಲಿಕೆ, ಕೃತಕ ಬುದ್ಧಿಮತ್ತೆ, ರೊಬೊಟಿಕ್ಸ್ ಮತ್ತು ಆಟೊಮೇಷನ್, ಡೇಟಾ ಅನಾಲಿಟಿಕ್ಸ್, ಪೆಗಾ, ಐಒಟಿ, ಬ್ಲಾಕ್ ಚೈನ್ ಮತ್ತಿತರ ಸ್ಥಾಪಿತ ಕೌಶಲಗಳನ್ನು ಕಂಪನಿಗಳು ಹುಡುಕುತ್ತಿದ್ದವು. ಕೌಶಲ ಹೊಂದಿರುವ ವಿದ್ಯಾರ್ಥಿಗಳಿಗೆ ನೀಡುವ ಪ್ಯಾಕೇಜ್ ಇತರರಿಗೆ ಹೋಲಿಸಿದರೆ ಹೆಚ್ಚಾಗಿವೆ ಎನ್ನುತ್ತಾರೆ ಕಾಲೇಜಿನ ಪ್ರಾಧ್ಯಾಪಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.