ಬೆಂಗಳೂರು: ನವೀಕೃತ ಇಂಧನ ಘಟಕಗಳಿಗೆ 10 ವರ್ಷಗಳ ಕಾಲ ನೀಡಲಾಗಿದ್ದ ತೆರಿಗೆ ವಿನಾಯ್ತಿ ವಾಪಸು ಪಡೆದಿದ್ದ ‘ಕೆಇಆರ್‌ಸಿ’ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) 2018ರ ಮೇ ತಿಂಗಳಲ್ಲಿ ಹೊರಡಿಸಿದ್ದ ಆದೇಶ ಪ್ರಶ್ನಿಸಿ ನವದೆಹಲಿಯ ‘ರಿನಿವ್ಯೂ ಪವರ್ ಲಿಮಿಟೆಡ್ ಕಂಪನಿ’ ಸೇರಿದಂತೆ ಒಟ್ಟು 14 ಕಂಪನಿಗಳು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್.ಸುಜಾತ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದೆ.

‘ಸೌರ, ಪವನ, ಕಿರು ಜಲ ವಿದ್ಯುತ್ ಘಟಕಗಳಿಗೆ ಕಂಪನಿಗಳು ಭಾರಿ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿರುತ್ತವೆ. ಇವುಗಳಿಗೆ ನೀಡಲಾದ ಸೌಲಭ್ಯ ವಾಪಸು ಪಡೆದಿರುವುದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗುತ್ತದೆ. ಅಂತೆಯೇ ಕಾಲ ಕಾಲಕ್ಕೆ ತೆರಿಗೆ ನಿರ್ಧರಿಸುವ ಅಧಿಕಾರ ಕೆಇಆರ್‌ಸಿಗೆ ಇಲ್ಲ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.