ಬೆಂಗಳೂರು: ಮನೆಯಲ್ಲಿ ಗಾಂಜಾ ಗಿಡ ಬೆಳೆಸಿದ್ದ ಆರೋಪದಡಿ ರಾಮ್ ಆಶೀಸ್ (33) ಎಂಬುವವರನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಕೊತ್ತನೂರು ಬಳಿಯ ಭೈರತಿ ನಿವಾಸಿ ರಾಮ್ ಆಶೀಸ್, ಬಹುಮಹಡಿ ಕಟ್ಟಡದ ಮೂರನೇ ಮಹಡಿಯಲ್ಲಿ ವಾಸವಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಖಾಲಿ ಬಕೆಟ್ನಲ್ಲಿ ಮಣ್ಣು ಹಾಕಿದ್ದ ಆರೋಪಿ, ಅದರಲ್ಲಿ ಆರು ತಿಂಗಳಿನಿಂದ ಗಾಂಜಾ ಗಿಡ ಬೆಳೆಸುತ್ತಿದ್ದರು. ಸದ್ಯ 6 ಅಡಿಯಷ್ಟು ಗಾಂಜಾ ಗಿಡ ಬೆಳೆದಿದೆ. ಗಾಂಜಾ ಎಲೆ, ಹೂವು ಹಾಗೂ ಮೊಗ್ಗುಗಳನ್ನು ಕಿತ್ತು ಒಣಗಿಸಿ ಮಾರಾಟ ಮಾಡಲು ಯೋಚಿಸಿದ್ದ. ಈ ಮೂಲಕ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವ ಕೃತ್ಯದಲ್ಲಿ ತೊಡಗಿದ್ದ.’

‘ಆರೋಪಿ ಗಿಡ ಬಳಸಿದ್ದ ಬಗ್ಗೆ ಮಾಹಿತಿ ಬಂದಿತ್ತು. ಸ್ಥಳಕ್ಕೆ ಹೋಗಿ ಪರಿಶೀಲಿಸಿ, ಆರೋಪಿಯನ್ನು ವಶಕ್ಕೆ ಪಡೆಯಲಾಯಿತು. ಗಾಂಜಾ ಗಿಡ ಜಪ್ತಿ ಮಾಡಲಾಗಿದೆ. ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.