ಬೆಂಗಳೂರು: ರೋಹಿತ್ ಚಕ್ರತೀರ್ಥ ಪಠ್ಯಪುಸ್ತಕ ಸಮಿತಿಯಲ್ಲಿದ್ದ ಕಾರಣ ಅಪ್ಪ ಗೋವಿಂದಾಚಾರ್ಯ ಅವರ ‘ಶುಕನಾಸನ ಉಪದೇಶ’ 10ನೇ ತರಗತಿಯ ಪಠ್ಯ ವಾಯಿತು.ಪಠ್ಯಪುಸ್ತಕಗಳಲ್ಲಿ ಇದುವರೆಗೂ ವಿರಾಜಿಸಿದವರ ನಿರ್ಗಮನವಾಗಿ, ಹೊಸಬರ ಆಗಮನಕ್ಕೆ ಅವಕಾಶವಾಯಿತು ಎಂದು ಲೇಖಕಿ ವೀಣಾ ಬನ್ನಂಜೆ ಹೇಳಿದರು.

ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಬುಧವಾರ ಹಮ್ಮಿಕೊಂಡಿದ್ದ ಆಚಾರ್ಯರ ಜನ್ಮಾರಾಧನೆ ಕಾರ್ಯಕ್ರಮದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಪ್ಪ ಹಾಗೂ ಚಕ್ರತೀರ್ಥ ಮಧ್ಯೆ ಆಪ್ತತೆ ಇತ್ತು. ಅವರ ಅಂಕಣಗಳನ್ನು ಅಪ್ಪ ಓದಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.ಚಕ್ರತೀರ್ಥ ತಮ್ಮ ಕೃತಿಗೆ ಅಪ್ಪನ ಬಳಿ ಮುನ್ನುಡಿ ಬರೆಸಿದ್ದರು ಎಂದು ನೆನಪಿಸಿಕೊಂಡರು.

’ಭಾರತವು ವಿವಿಧತೆಯಲ್ಲಿ ಏಕತೆಯ ದೇಶವಲ್ಲ. ಏಕತೆಯಲ್ಲಿ ವಿವಿಧತೆ ಹೊಂದಿರುವ ದೇಶ.ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಹರಿವ ನದಿ ಒಂದೇ. ಬನ್ನಂಜೆಯವರೂ ಏಕತೆಯಲ್ಲಿ ವೈವಿಧ್ಯದನಂಬಿಕೆ ಇಟ್ಟುಕೊಂಡು ಕೃತಿಗಳ ರಚನೆ ಮಾಡಿದರು‘ ಎಂದು ರೋಹಿತ್ ಚಕ್ರತೀರ್ಥ ಹೇಳಿದರು.

ವಿದ್ವಾಂಸ ಕೃಷ್ಣರಾಜ ಕುತ್ಪಾಡಿ ವಿಶೇಷ ಉಪನ್ಯಾಸ ನೀಡಿದರು. ಎಂ.ವೆಂಕಟೇಶ್ ಕುಮಾರ್, ಸತೀಶ್ ಕೊಳ್ಳಿ, ಕೇಶವ ಜೋಷಿ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.