ಬೆಂಗಳೂರು: ಕೇಂದ್ರ ಚುನಾವಣೆ ಆಯೋಗದ ಮಾರ್ಗಸೂಚಿಗೆ ವಿರುದ್ಧವಾಗಿದ್ದ ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳ ವರ್ಗಾವಣೆ ಆದೇಶವನ್ನು ತಿದ್ದುಪಡಿ ಮಾಡಿ ನಗರಾಭಿವೃದ್ಧಿ ಇಲಾಖೆ ಗುರುವಾರ ಆದೇಶ ಹೊರಡಿಸಿದೆ.

ಮೂವರು ಕಂದಾಯ ಅಧಿಕಾರಿಗಳನ್ನು ಸ್ವಕ್ಷೇತ್ರದ ವಿಧಾನಸಭೆ ಕ್ಷೇತ್ರಗಳ ಕಚೇರಿಗಳಿಗೆ ಜ.31ರಂದು ವರ್ಗಾವಣೆ ಮಾಡಲಾಗಿತ್ತು. ಈ ಬಗ್ಗೆ ‘ಪ್ರಜಾವಾಣಿ’ ಫೆ.1ರಂದು ವರದಿ ಮಾಡಿತ್ತು.

ಕಂದಾಯ ಅಧಿಕಾರಿಗಳಾದ ಎಸ್.ಆರ್. ಪ್ರಕಾಶ್, ನಾರಾಯಣಸ್ವಾಮಿ, ಡಿ. ಸರಸ್ವತಿ ಅವರನ್ನು ಸ್ವಕ್ಷೇತ್ರಕ್ಕೆ ವರ್ಗಾಯಿಸಲಾಗಿತ್ತು. ಇದೀಗ ಅದನ್ನು ತಿದ್ದುಪಡಿ ಮಾಡಿ, ನಾರಾಯಣಸ್ವಾಮಿ ಅವರನ್ನು ಮಲ್ಲೇಶ್ವರಕ್ಕೆ, ಎಸ್.ಆರ್. ಪ್ರಕಾಶ್ ಅವರನ್ನು ಕೆ.ಆರ್. ಪುರಕ್ಕೆ ಹಾಗೂ ಡಿ. ಸರಸ್ವತಿ ಅವರನ್ನು ಕೆಂಗೇರಿ ಕಂದಾಯ ಅಧಿಕಾರಿ ಕಚೇರಿಗೆ ವರ್ಗಾಯಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.