ಬೆಂಗಳೂರು: ಮಕ್ಕಳ ಮಾರಾಟ ಪ್ರಕರಣದಲ್ಲಿ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ರಾಜಾಜಿನಗರದಲ್ಲಿ ಕ್ಲಿನಿಕ್ ನಡೆಸುತ್ತಿದ್ದ ನಕಲಿ ವೈದ್ಯ ಕೆವಿನ್ ಹಾಗೂ ಆರ್.ಟಿ. ನಗರದ ನಿವಾಸಿ ರಮ್ಯಾ ಎಂಬುವರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಬಂಧಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

‘ಕೆವಿನ್ ವೈದ್ಯಕೀಯ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ, ರಾಜಾಜಿ ನಗರದಲ್ಲಿ ಕ್ಲಿನಿಕ್ ನಡೆಸುತ್ತಿದ್ದ. ಮಾರಾಟವಾದ ಮಕ್ಕಳಿಗೆ ಬೇಕಾದ ಎಲ್ಲ ದಾಖಲೆಗಳನ್ನು ತನ್ನ ಕ್ಲಿನಿಕ್‌ನಲ್ಲಿ ತಯಾರಿಸಿ ದಂಪತಿಗೆ ಹಸ್ತಾಂತರಿಸುತ್ತಿದ್ದ. ಜನನ ಪ್ರಮಾಣಕ್ಕೆ ಬೇಕಾದ ವೈದ್ಯರ ಸಹಿ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡುತ್ತಿದ್ದ’ ಎಂದು ಪೊಲೀಸರು ಹೇಳಿದರು.

ರಾಧಾ ಮತ್ತು ಮಹಾಲಕ್ಷ್ಮಿ ಜತೆಗೆ ಸೇರಿಕೊಂಡು ರಮ್ಯಾ ಮಕ್ಕಳ ಮಾರಾಟ ದಂಧೆ ನಡೆಸುತ್ತಿದ್ದಳು. ಈ ಹಿಂದೆ ಹಣಕ್ಕಾಗಿ ತನ್ನ ಮಗುವನ್ನೇ ರಮ್ಯಾ ಮಾರಾಟ ಮಾಡಿದ್ದಳು. ಅಲ್ಲದೆ, ಕೆಲ ವರ್ಷದ ಹಿಂದೆ ಮದುವೆಯಾದ ಮಗಳ ಮಗುವನ್ನು ದಂಧೆಕೋರರ ಜತೆ ಸೇರಿಕೊಂಡು ಮಾರಾಟ ಮಾಡಿರು ವುದು ತನಿಖೆಯಲ್ಲಿ ಗೊತ್ತಾಗಿದೆ.

‘ಕುಟುಂಬದ ಯುವತಿಯೊಬ್ಬಳು ಗರ್ಭಿಣಿಯಾಗಿದ್ದಳು. ಆಕೆ ಮಗುವನ್ನು ಗರ್ಭಪಾತ ಮಾಡಿಸಲು ಮುಂದಾಗಿದ್ದಳು. ಆದರೆ, ರಮ್ಯಾ ಆಕೆಗೆ ಮನವೊಲಿಸಿ ಹಣ ಕೊಡಿಸುವುದಾಗಿ ಹೇಳಿದ್ದಳು. ತನ್ನ ಮನೆಯಲ್ಲಿ ಯುವತಿಗೆ ಆರೈಕೆ ಮಾಡಿದ್ದಳು. ಬಳಿಕ ಇತರೆ ಆರೋಪಿಗಳ ಜತೆಗೆ ಸೇರಿಕೊಂಡು ಮಗು ಮಾರಾಟ ನಡೆಸಿದ್ದಳು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.