ಚಿತ್ರಸಂತೆಯಲ್ಲಿದ್ದ ಸಿಂಹದ ಕಲಾಕೃತಿಯೊಂದನ್ನು ಕಲಾಸಕ್ತರು ಫೋಟೊ ಕ್ಲಿಕ್ಕಿಸಿಕೊಂಡರು
₹ 15 ಲಕ್ಷ ಮೌಲ್ಯದ ಜಲ್ಲಿಕಟ್ಟು ಕ್ರೀಡೆಯ ಕಲಾಕೃತಿ
ಮೈಸೂರಿನ ದಸರಾ ದರ್ಬಾರ್ ಬಿಂಬಿಸುವ ಕಲಾಕೃತಿಗಳು
ಚಿತ್ರಸಂತೆಯಲ್ಲಿದ್ದ ಉಬ್ಬು ಕಲಾಕೃತಿಗಳು
ಕಲಾವಿದರೊಬ್ಬರು ವಿವಿಧ ಮಾದರಿಯ ಕಲಾಕೃತಿಗಳನ್ನು ಪ್ರದರ್ಶಿಸಿದರು
ಚಿತ್ರಸಂತೆಗೆ ಹದಿನೈದು ವರ್ಷಗಳಿಂದ ಬರುತ್ತಿದ್ದೇನೆ. ಹೆಚ್ಚಾಗಿ ಉತ್ಸವಗಳ ಕಲಾಕೃತಿ ರಚಿಸುತ್ತಿದ್ದು ಕಲಾಸಕ್ತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.
।ಮೀನಾಕ್ಷಿ ಸದಲಗಿ ಕಲಾವಿದೆ ಕಲಾ ಗ್ಯಾಲರಿಗಳಲ್ಲಿ ದುಬಾರಿ ಶುಲ್ಕ ನೀಡಿ ಪ್ರದರ್ಶನ ನೀಡುವುದು ಕಷ್ಟ. ಇಲ್ಲಿ ಎಲ್ಲ ರೀತಿಯ ಕಲಾಸಕ್ತರ ಜತೆ ಸಂಪರ್ಕ ಬಾಂಧವ್ಯ ಬೆಳೆಯುತ್ತದೆ.
।ಪರಶುರಾಮ್ ಕಲಾವಿದಕಲಾವಿದರಿಗೆ ಚಿತ್ರಸಂತೆ ಉತ್ತಮ ವೇದಿಕೆಯಾಗಿದ್ದು ಹಲವು ವರ್ಷಗಳಿಂದ ಪಾಲ್ಗೊಳ್ಳುತ್ತಿದ್ದೇನೆ. ವರ್ಷದಿಂದ ವರ್ಷಕ್ಕೆ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚುತ್ತಿದೆ.
।ಚೈತ್ರ ಮಂದಾರ ಕಲಾವಿದೆ 1500 ಕಲಾವಿದರು ಭಾಗಿ
ದೇಶದ ವಿವಿಧ ಭಾಗಗಳಿಂದ 1500 ಕಲಾವಿದರು ಚಿತ್ರಸಂತೆಯಲ್ಲಿ ಭಾಗವಹಿಸಿ ಕಲಾಕೃತಿಗಳನ್ನು ಪ್ರದರ್ಶಿಸಿದರು. ಕರ್ನಾಟಕದ ಜತೆಗೆ ಕೇರಳ ತಮಿಳುನಾಡು ಆಂಧ್ರಪ್ರದೇಶ ಗೋವಾ ಮಹಾರಾಷ್ಟ್ರ ಪಂಜಾಬ್ ಪಶ್ಚಿಮ ಬಂಗಾಳ ಒಡಿಶಾ ಸೇರಿದಂತೆ ವಿವಿಧ ರಾಜ್ಯಗಳ ಕಲಾವಿದರು ಪಾಲ್ಗೊಂಡಿದ್ದರು. 1300ಕ್ಕೂ ಅಧಿಕ ಮಳಿಗೆಗಳು ಮೇಳದಲ್ಲಿ ಇದ್ದವು. ವೃತ್ತಿನಿರತ ಕಲಾವಿದರ ಜತೆಗೆ ಹವ್ಯಾಸಿ ಕಲಾವಿದರು ಹಾಗೂ ಕಲಾ ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದರು. ಶಿವಾನಂದ ಸರ್ಕಲ್‌ನಿಂದ ವಿಂಡ್ಸನ್ ಮ್ಯಾನರ್‌ವರೆಗೆ ಕುಮಾರಕೃಪಾ ರಸ್ತೆಯಲ್ಲಿ ಕ್ರೆಸೆಂಟ್ ರಸ್ತೆಯ ಆಯ್ದ ಸ್ಥಳದಲ್ಲಿ ಶಿವಾನಂದ ವೃತ್ತದಿಂದ ಗುರುರಾಜ ಕಲ್ಯಾಣ ಮಂಟಪದವರೆಗೆ ಸ್ಟೀಲ್ ಮೇಲ್ಸೇತುವೆ ಕೆಳಭಾಗ ಹಾಗೂ ಭಾರತ ಸೇವಾದಳದ ಆವರಣದಲ್ಲಿ ಕಲಾಕೃತಿಗಳ ಪ್ರದರ್ಶನ ನಡೆಯಿತು. ಪರಿಷತ್ತು ಸಂಗ್ರಹಿಸಿರುವ ತೊಗಲು ಗೊಂಬೆ ಹಾಗೂ ಮೈಸೂರಿನ ಸಾಂಪ್ರದಾಯಿಕ ಕಲಾಕೃತಿಗಳ ಪ್ರದರ್ಶನ ಪರಿಷತ್ತಿನ ಗ್ಯಾಲರಿಗಳಲ್ಲಿ ಹಮ್ಮಿಕೊಳ್ಳಲಾಗಿತ್ತು.
₹15 ಲಕ್ಷದವರೆಗಿನ ಕಲಾಕೃತಿ
ಚಿತ್ರಸಂತೆಯಲ್ಲಿ ₹ 1 ಸಾವಿರದಿಂದ ₹15 ಲಕ್ಷದವರೆಗಿನ ಕಲಾಕೃತಿಗಳಿದ್ದವು. ಕೆಲವರು ದುಬಾರಿ ಬೆಲೆ ಕೇಳಿ ಅಚ್ಚರಿಪಟ್ಟರೂ ಕಲಾವಿದರ ಪ್ರತಿಭೆ ಮತ್ತು ಶ್ರಮಕ್ಕೆ ತಲೆದೂಗಿದರು. ಆಂಧ್ರಪ್ರದೇಶದ ಕಲಾವಿದ ಹನುಮಂತ ಅವರು ಲೆದರ್ ಶೀಟ್‌ನಲ್ಲಿ ರಾಮಾಯಣದ ಸುಂದರ ಕಾಂಡದ ಘಟನೆಗಳನ್ನು ಚಿತ್ರಿಸಿದ್ದು ಇದನ್ನು ಪ್ರದರ್ಶನಕ್ಕೆ ಇರಿಸಿದ್ದರು. ಬೆಳಗಾವಿಯ ಮೀನಾಕ್ಷಿ ಸದಲಗಿ ಅವರು ಮೈಸೂರಿನ ರಾಜ ವೈಭವವನ್ನು ನೆನಪಿಸುವ ಹಲವು ಕಲಾಕೃತಿಗಳನ್ನು ಪ್ರದರ್ಶನಕ್ಕೆ ತಂದಿದ್ದರು. ಹೈದರಾಬಾದ್ ಕಲಾವಿದ ಪರಶುರಾಮ್ ಅವರು ತೈಲವರ್ಣ ಬಳಸಿ ಜಲ್ಲಿಕಟ್ಟು ಕ್ರೀಡೆಯನ್ನು ಚಿತ್ರಿಸಿದ್ದು ಇದಕ್ಕೆ ₹ 15 ಲಕ್ಷ ನಿಗದಿಪಡಿಸಿದ್ದರು. ಇದು ಎಂಟು ಅಡಿ ಉದ್ದ ಹಾಗೂ ಆರು ಅಡಿ ಅಗಲವಿದ್ದು ಇದಕ್ಕೆ ತೇಗದ ಮರದ ಚೌಕಟ್ಟು ಬಳಸಲಾಗಿದೆ.
ಫೀಡರ್ ಬಸ್ ಕಾರ್ಯಾಚರಣೆ
ಚಿತ್ರಸಂತೆಗೆ ತೆರಳುವವರಿಗೆ ಅನುಕೂಲಕ್ಕಾಗಿ ಇದೇ ಮೊದಲ ಬಾರಿ ಮೆಟ್ರೊ ಫೀಡರ್ ಬಸ್ ಕಾರ್ಯಾಚರಣೆ ನಡೆಸಿದವು. ಕೆಂಪೇಗೌಡ ಬಸ್ ನಿಲ್ದಾಣ–ಆನಂದರಾವ್ ಸರ್ಕಲ್–ಶಿವಾನಂದ ಸ್ಟೋರ್ಸ್ ರಸ್ತೆಯಲ್ಲಿ ನಾಲ್ಕು ಬಿಎಂಟಿಸಿ ಬಸ್‌ಗಳು ಮತ್ತು ಮಂತ್ರಿ ಮಾಲ್ ಮೆಟ್ರೊ ನಿಲ್ದಾಣ-ವಿಧಾನಸೌಧ ಸೆಂಟ್ರಲ್ ಟಾಕೀಸ್ ಲಿಂಕ್ ರಸ್ತೆ ಶಿವಾನಂದ ಸ್ಟೋರ್ಸ್ ರಸ್ತೆಯಲ್ಲಿ ನಾಲ್ಕು ಬಸ್‌ಗಳು ಪ್ರತಿ 10 ನಿಮಿಷಕ್ಕೆ ಒಂದರಂತೆ ಸಂಚರಿಸಿದವು.