ಬೆಂಗಳೂರು: ಮಹಿಳಾ ಕಾಫಿ ಒಕ್ಕೂಟ-ಭಾರತ ಆವೃತ್ತಿ ಸಂಸ್ಥೆ ಅ.29. 30ರಂದು ಜಯಮಹಲ್ ಪ್ಯಾಲೇಸ್ ಹೋಟೆಲ್ನಲ್ಲಿ ವಾರ್ಷಿಕ ಕಾಫಿ ಸಂತೆ ಹಮ್ಮಿಕೊಂಡಿದೆ.

ಭಾರತದ ಸಾಂಪ್ರದಾಯಿಕ ಹಾಗೂ ಸಾಂಪ್ರದಾಯಿಕವಲ್ಲದ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಕೆಲಸ ಮಾಡುವ ಮಹಿಳೆಯರು ಮತ್ತು ಅವರ ಮಕ್ಕಳ ಆರೋಗ್ಯ, ಶಿಕ್ಷಣದ ಯೋಜನೆಗಳನ್ನು ಬೆಂಬಲಿಸಲು ನಿಧಿ ಸಂಗ್ರಹಣೆ, ಕಾಫಿ ಆಧಾರಿತ ವಿವಿಧ ಚಟುವಟಿಕೆಗಳನ್ನು ಸಮನ್ವಯಗೊಳಿಸಲು, ಅವರ ಸಬಲೀಕರಣ, ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಸಲು, ಅರಿವನ್ನು ವಿಸ್ತರಿಸಲು ಸಂತೆ ಆಯೋಜಿಸಲಾಗಿದೆ.

6ನೇ ವಾರ್ಷಿಕ ಕಾಫಿ ಸಂತೆಯಲ್ಲಿ ‘ವುಮೆನ್ ಸ್ಟಾರ್ಸ್ ಬ್ರೂವರ್ ಸ್ಕಿಲ್ಸ್ ಚಾಂಪಿಯನ್ಷಿಪ್’ ಸ್ಪರ್ಧೆ ನಡೆಯಲಿದೆ. ‘ಕಾಪಿ ನಕ್ಷತ್ರ’ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಮನರಂಜನಾ ಕಾರ್ಯಕ್ರಮಗಳೂ ಇರಲಿವೆ ಎಂದು ಸಂಸ್ಥೆಯ ಅಧ್ಯಕ್ಷೆ ಸುನಾಲಿನಿ ಮೆನನ್, ಕಾಫಿ ಬೆಳೆಗಾರ್ತಿ ಪೂರ್ಣಿಮಾ ಜೈರಾಜ್ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.