ರಾಜರಾಜೇಶ್ವರಿನಗರ: ಉಲ್ಲಾಳು ವಾರ್ಡ್‍ನ ಡಿ.ದೇವರಾಜ ಅರಸು ಬಡಾವಣೆ ಹಾಗೂ ನಾಗದೇವನಹಳ್ಳಿಯ ಹಲವು ರಸ್ತೆಗಳಿಗೆ ಬಿಬಿಎಂಪಿ ಬೃಹತ್ ರಸ್ತೆ ಕಾಮಗಾರಿ ವಿಭಾಗದ ವತಿಯಿಂದ ಡಾಂಬರೀಕರಣ ನಡೆದಾಗ, ರಸ್ತೆ ಬದಿಯ ಮರಗಳ ಬುಡಕ್ಕೂ ಕಾಂಕ್ರಿಟ್ ಹಾಕಿದ್ದರು. ಬಿಬಿಎಂಪಿ ವಾರ್ಡ್‍ಮಟ್ಟದ ಕಾಮಗಾರಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ರಾಜಣ್ಣ ಬೊಮ್ಮೇಗೌಡ ಅವರೇ ಮುಂದೆ ನಿಂತು ಮರಗಳ ಬುಡಕ್ಕೆ ಹಾಕಿದ ಡಾಂಬರು ತೆರವುಗೊಳಿಸಿದರು.

‘ರಸ್ತೆಬದಿಯ ಮರಗಳ ಬುಡಕ್ಕೆ ಡಾಂಬರು’ ಎಂಬ ಶೀರ್ಷಕೆಯ ವರದಿ ’ಪ್ರಜಾವಾಣಿ‘ಯಲ್ಲಿ ಪ್ರಕಟವಾಗಿತ್ತು.

ಎಂಜಿನಿಯರ್ ರಾಜಣ್ಣ ಬೊಮ್ಮೇಗೌಡ ಮಾತನಾಡಿ, ‘ನಾಗರಿಕರಿಗೆ ಮೂಲಸೌಲಭ್ಯ ನೀಡುವ ಸಮಯದಲ್ಲಿ ಗುತ್ತಿಗೆದಾರರು ಮರಗಳ ಬುಡಕ್ಕೆ ಡಾಂಬರು ಹಾಕಬಾರದು. ಪರಿಸರ, ಉತ್ತಮ ಗಾಳಿ ಬೇಕು. ಪತ್ರಿಕೆಯಲ್ಲಿ ವರದಿ ನೋಡಿ ನಾನೇ ಖುದ್ದಾಗಿ ನಿಂತು ಮರಗಳ ಬುಡಕ್ಕೆ ಹಾಕಿರುವ ಡಾಂಬರು ತೆರವುಗೊಳಿಸಿ, ಬೇರು, ಕಾಂಡಗಳಿಗೆ ಮಳೆ ನೀರು ಸೇರುವಂತೆ ಮಾಡಿಸಿದೆ’ ಎಂದರು.

ವಿದ್ಯಾರ್ಥಿನಿ ಸಿ.ವೇದ ಮಾತನಾಡಿ, ‘ಅಭಿವೃದ್ಧಿ ಕಾಮಗಾರಿ ನೆಪದಲ್ಲಿ ಮರಗಳನ್ನು ಗುತ್ತಿಗೆದಾರರು, ಅಧಿಕಾರಿಗಳು ನಾಶ ಮಾಡಬಾರದು. ಬಿಬಿಎಂಪಿ ಬೃಹತ್ ಕಾಮಗಾರಿ ವಿಭಾಗದ ವತಿಯಿಂದ ನಡೆದಿರುವ ಕಾಮಗಾರಿಯಾಗಿದ್ದರೂ ತಮಗೆ ಸಂಬಂಧಪಡದಿದ್ದರೂ ವಾರ್ಡ್ ಮಟ್ಟದ ಎಂಜಿನಿಯರ್ ರಾಜಣ್ಣ ಬಿ. ಅವರು ಮರಗಳ ಬುಡದಲ್ಲಿದ್ದ ಡಾಂಬರು ತೆರಳುಗೊಳಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.