ಬೆಂಗಳೂರು: ವಿದ್ಯುತ್ ದರವನ್ನು ಪ್ರತಿ ಯುನಿಟ್ಗೆ ₹1.96 ಹೆಚ್ಚಳ ಮಾಡಬೇಕು ಎಂದು ಬೆಸ್ಕಾಂ ಇಟ್ಟಿದ್ದ ಪ್ರಸ್ತಾವಕ್ಕೆ ಸಾರ್ವಜನಿಕರು ಮತ್ತು ಸಂಘ–ಸಂಸ್ಥೆಗಳು ತೀವ್ರ ವಿರೋಧ ವ್ಯಕ್ತಪಡಿಸಿದವು.

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (ಕೆಇಆರ್ಸಿ) ಈ ಸಂಬಂಧ ನಡೆಸಿದ ಸಾರ್ವಜನಿಕ ವಿಚಾರಣೆಯಲ್ಲಿ ಕೈಗಾರಿಕೋದ್ಯಮಿಗಳು ಕೂಡ ಪ್ರಸ್ತಾವವನ್ನು ವಿರೋಧಿಸಿದರು.

ಬಿ.ಪ್ಯಾಕ್ ಸಂಸ್ಥೆಯ ಸಿಇಒ ರೇವತಿ ಅಶೋಕ್, ‘ಬೆಸ್ಕಾಂ ಪ್ರತಿವರ್ಷ ವಿದ್ಯುತ್ ದರ ಪರಿಷ್ಕರಿಸುವ ಪ್ರಸ್ತಾವ ಮುಂದಿಡುತ್ತದೆ. ಆದರೆ, ವಿದ್ಯುತ್ ಖರೀದಿ ವೆಚ್ಚಮತ್ತು ನಾಗರಿಕರಿಗೆ ಒದಗಿಸುತ್ತಿರುವ ಸೇವೆಯ ಗುಣಮಟ್ಟದಲ್ಲಿಸುಧಾರಣೆ ಕಂಡುಬಂದಿಲ್ಲ. ನಾಲ್ಕು ವರ್ಷಗಳಿಂದ ಆಯೋಗವು ಅನುಮೋದಿಸಿದ ದರ ಮತ್ತು ಮಾರಾಟ ಮಟ್ಟವನ್ನು ಪೂರೈಸಲು ಬೆಸ್ಕಾಂ ವಿಫಲವಾಗಿದೆ’ ಎಂದರು.

‘ವಿದ್ಯುತ್ ಖರೀದಿ ಮತ್ತು ಮಾರಾಟದ ಮುನ್ಸೂಚನೆಯನ್ನು ಬೆಸ್ಕಾಂ ಮಂಡಿಸಬೇಕು ಮತ್ತು ಕಡಿಮೆ ದರದ ವಿದ್ಯುತ್ ಖರೀದಿಗೆ ಆಯೋಗ ಸೂಚಿಸಬೇಕು’ ಎಂದು ಸಾರ್ವಜನಿಕರು ಮನವಿ ಮಾಡಿದರು.

ಆಯೋಗಕ್ಕೆ ಮನವಿ

* ಎಚ್.ಟಿ. ಕೈಗಾರಿಕಾ ಮತ್ತು ವಾಣಿಜ್ಯ ವಲಯದ ದರವನ್ನು 2014ರ ಆರ್ಥಿಕ ವರ್ಷದ ದರದ ಅನುಸಾರ (ಪ್ರತಿ ಯುನಿಟ್ಗೆ ₹7.41 ಮತ್ತು ₹7.91) ಪರಿಷ್ಕರಿಸಬೇಕು.

*ವಿದ್ಯುತ್ ಖರೀದಿ ಮಾಡುವ ಹಂತದಲ್ಲಿ ಉತ್ಪಾದಕರು ಹಾಗೂ ವಿತರಕರು ನಷ್ಟ ಅನುಭವಿಸದಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು.

*ಬೆಸ್ಕಾಂ ಪ್ರತಿವರ್ಷ ದರ ಪರಿಷ್ಕರಣೆ ಪ್ರಕಟಿಸುವ ಬದಲು, ಐದು ವರ್ಷಗಳ ಮಾರ್ಗಸೂಚಿ ಪ್ರಕಟಿಸಬೇಕು.

*ಆರ್ಥಿಕ ವರ್ಷದ ಬೆಸ್ಕಾಂ ಲೆಕ್ಕ ಪುಸ್ತಕದಲ್ಲಿ ಅನುಮಾನಾಸ್ಪದ, ಸಾಲ ಹಾಗೂ ವೆಚ್ಚಗಳನ್ನಾಗಿ ವಿಂಗಡಿಸಿದ ಸಾಲಗಳ ಬಗ್ಗೆ ವಿವರಗಳನ್ನು ಆಯೋಗಕ್ಕೆ ನೀಡಬೇಕು. ಇದನ್ನು ಸಾರ್ವಜನಿಕವಾಗಿ ಪ್ರಕಟಿಸಲು ಬೆಸ್ಕಾಂಗೆ ಸೂಚನೆ ನೀಡಬೇಕು.

ವಿರೋಧಕ್ಕೆ ಕಾರಣ

*ಆಯೋಗದ ಮಾನದಂಡಗಳನ್ನು ಅನುಸರಿಸುವಲ್ಲಿ ಬೆಸ್ಕಾಂ ವಿಫಲವಾಗಿದ್ದರಿಂದಲೇ ₹177 ಕೋಟಿ ನಷ್ಟವಾಗಿದೆ. ಈ ಮೊತ್ತವನ್ನು ಪರಿಷ್ಕರಣೆಯಲ್ಲಿ ಗಣನೆಗೆ ತೆಗೆದುಕೊಳ್ಳಬಾರದು.

*ಕಡಿಮೆ ದರದಲ್ಲಿ ವಿದ್ಯುತ್ ಲಭ್ಯವಿದ್ದರೂ ‘ಮಧ್ಯಂತರ ಅವಧಿ ಖರೀದಿ’ ನೆಪದಲ್ಲಿ ಹೆಚ್ಚು ಬೆಲೆಗೆ ವಿದ್ಯುತ್ ಖರೀದಿಸಿದ ಕಾರಣ₹1,460 ಕೋಟಿ ವೆಚ್ಚ ಹೆಚ್ಚಾಗಿದೆ. ದರ ಪರಿಷ್ಕರಣೆ ವೇಳೆ ಈ ಮೊತ್ತವನ್ನು ಪರಿಗಣಿಸಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.