ಬೆಂಗಳೂರು: ಜಾಲಹಳ್ಳಿಯ ವಾಯುನೆಲೆ ಪ್ರದೇಶದಲ್ಲಿ ಅಪರಿಚಿತರು ‘ಡ್ರೋನ್’ ಹಾರಿಸಿರುವ ಅನುಮಾನ ವ್ಯಕ್ತವಾಗಿದ್ದು, ಈ ಬಗ್ಗೆ ಗಂಗಮ್ಮನಗುಡಿ ಠಾಣೆಯಲ್ಲಿ ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಾಗಿದೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ, ‘ವಾಯುನೆಲೆ ಪ್ರದೇಶದಲ್ಲಿ 40 ದಿನಗಳ ಹಿಂದೆ ಡ್ರೋನ್ ಮಾದರಿ ವಸ್ತುವಿನ ಬೆಳಕು ನೋಡಿರುವುದಾಗಿ ಸಿಬ್ಬಂದಿ ದೂರು ನೀಡಿದ್ದರು. ಅಂದಿನಿಂದಲೂ ವಾಯುನೆಲೆ ಬಳಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಅಂಥ ಯಾವುದೇ ಡ್ರೋನ್ ಇದುವರೆಗೂ ಕಂಡುಬಂದಿಲ್ಲ’ ಎಂದರು.

‘ವಾಯುನೆಲೆ ಪ್ರದೇಶವನ್ನು ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ. ಸಾರ್ವಜನಿಕರ ಪ್ರವೇಶವನ್ನೂ ನಿರ್ಬಂಧಿಸಲಾಗಿದೆ. ಇಂಥ ಸ್ಥಳದಲ್ಲಿ ರಾತ್ರಿ ಕಾವಲು ಕಾಯುತ್ತಿದ್ದ ವಾಯುನೆಲೆ ಸಿಬ್ಬಂದಿಗೆ, ಆಕಾಶದಲ್ಲಿ ಡ್ರೋನ್ ಮಾದರಿ ಉಪಕರಣವೊಂದರ ಬೆಳಕು ಕಾಣಿಸಿತ್ತು ಎನ್ನಲಾಗಿದೆ. ಇದರಿಂದ ವಾಯುನೆಲೆಯಲ್ಲಿ ಆತಂಕ ಸೃಷ್ಟಿಯಾಗಿತ್ತು.’

‘ಅಕ್ಕ–ಪಕ್ಕದ ಅಪಾರ್ಟ್‌ಮೆಂಟ್ ಸಮುಚ್ಚಯ ಹಾಗೂ ಮನೆಗಳಲ್ಲಿ ಪರಿಶೀಲನೆ ಸಹ ನಡೆಸಲಾಗಿದೆ. ಅಂದು ಡ್ರೋನ್ ಹಾರಾಡಿದ ಬಗ್ಗೆ ಸದ್ಯಕ್ಕೆ ಯಾವುದೇ ಪುರಾವೆಗಳು ಸಿಕ್ಕಿಲ್ಲ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.