ಬೆಂಗಳೂರು: ಹೊರ ರಾಜ್ಯಗಳಿಂದ ನಗರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮಾದಕ ವಸ್ತುಗಳು ಸರಬರಾಜು ಆಗುತ್ತಿರುವ ಅನುಮಾನದ ಮೇರೆಗೆ ಕೇಂದ್ರ ವಿಭಾಗದ ಕೊರಿಯರ್ ಕಚೇರಿಗಳ ಮೇಲೆ ಪೊಲೀಸರು ಬುಧವಾರ ದಿಢೀರ್ ದಾಳಿ ನಡೆಸಿದರು.

ವಿಶಾಖಪಟ್ಟಣದಿಂದ ಬೆಂಗಳೂರಿಗೆ ಗಾಂಜಾ ಹಾಗೂ ಇತರ ಮಾದಕ ವಸ್ತುಗಳು ಪೂರೈಕೆಯಾಗುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿವೆ. ಡ್ರಗ್ಸ್ ಪೂರೈಕೆದಾರರು ಅನುಮಾನ ಬರದಂತೆ ಕೊರಿಯರ್ ಮೂಲಕ ಡ್ರಗ್ಸ್ ಸಾಗಿಸುವ ಮಾರ್ಗ ಕಂಡುಕೊಂಡಿದ್ದರು.

ಕೇಂದ್ರ ವಿಭಾಗದ ವಿವೇಕನಗರ, ಅಶೋಕನಗರ, ಸಂಪಂಗಿ ರಾಮನಗರ, ಸದಾಶಿವನಗರ, ಶೇಷಾದ್ರಿಪುರ, ವೈಯಾಲಿಕಾವಲ್ ಭಾಗದಲ್ಲಿ ಹೆಚ್ಚಾಗಿ ಮಾದಕ ವಸ್ತುಗಳು ಸರಬರಾಜು ಆಗುತ್ತಿರುವ ಕುರಿತು ಮಾಹಿತಿ ಇದ್ದಿದ್ದರಿಂದ ಈ ಭಾಗದಲ್ಲಿರುವ ಕೊರಿಯರ್ ಕಚೇರಿಗಳ ಮೇಲೆ ದಾಳಿ ನಡೆಸಿದರು. 12 ಶ್ವಾನಗಳಿಂದ ವಿವಿಧೆಡೆ ತಪಾಸಣೆ ನಡೆಯಿತು.

‘ಕೇಂದ್ರ ವಿಭಾಗದ ವ್ಯಾಪ್ತಿಯಲ್ಲಿ ಡ್ರಗ್ಸ್ ಪೂರೈಕೆ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಡ್ರಗ್ಸ್ ಪೂರೈಸುವವರು ಹಾಗೂ ಖರೀದಿಸುವವರ ಮೇಲೆ ನಿಗಾ ಇಡಲಾಗಿದೆ’ ಎಂದು ದಾಳಿಯ ನೇತೃತ್ವ ವಹಿಸಿದ್ದ ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.