ಬೆಂಗಳೂರು: ಸಿಬಿಐ ಅಧಿಕಾರಿಯೆಂದು ಹೇಳಿಕೊಂಡು ವೃದ್ಧೆಗೆ ವಿಡಿಯೊ ಕರೆ ಮಾಡಿ ₹10.21 ಲಕ್ಷ ವಂಚಿಸಲಾಗಿದ್ದು, ಈ ಸಂಬಂಧ ಸೆಂಟ್ರಲ್ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

76 ವರ್ಷದ ವೃದ್ಧೆ ಹಣ ಕಳೆದುಕೊಂಡಿದ್ದಾರೆ.

‘ಕನ್ನಿಂಗ್ಹ್ಯಾಮ್ ರಸ್ತೆಯ ಜಿಪಿಒನಲ್ಲಿ ನೆಲಸಿರುವ ವೃದ್ಧೆಗೆ ವೊಡಾಫೋನ್ನಿಂದ ಕರೆ ಮಾಡುತ್ತಿರುವುದಾಗಿ ವ್ಯಕ್ತಿಯೊಬ್ಬ ತಿಳಿಸಿದ್ದ. ನೀವು ಅಪರಾಧ ಮಾಡಿದ್ದೀರಿ. ನಿಮ್ಮ ಫೋನ್ ಸಂಪರ್ಕ ಕಡಿತ ಮಾಡುವುದಾಗಿ ಬೆದರಿಕೆ ಹಾಕಿದ್ದ. ಅಲ್ಲದೇ ಸಿಬಿಐ ಅಧಿಕಾರಿಗಳಿಗೆ ಕರೆಗಳ ವಿವರ ನೀಡುವುದಾಗಿ ಬೆದರಿಸಿದ್ದ. ಕೆಲವು ದಿನಗಳ ಬಳಿಕ ಸಿಬಿಐ ಅಧಿಕಾರಿ ಎಂದು ಹೇಳಿಕೊಂಡು ಮತ್ತೊಬ್ಬ ವ್ಯಕ್ತಿ ಕರೆ ಮಾಡಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಭಾಗಿ ಆಗಿರುವುದಾಗಿ ವೃದ್ಧೆಗೆ ಹೆದರಿಸಿದ್ದ’ ಎಂದು ಪೊಲೀಸರು ಹೇಳಿದರು.

‘ವಾರಂಟ್ ಜಾರಿ ಆಗಿದ್ದು, ಬಂಧಿಸಲಾಗುವುದು. ತನಿಖೆಗೆ ಸಹಕಾರ ನೀಡಿದರೆ ಕ್ರಮ ತೆಗೆದುಕೊಳ್ಳುವುದಿಲ್ಲ. ಇದಕ್ಕಾಗಿ ಹಣ ವರ್ಗಾವಣೆ ಮಾಡಬೇಕು. ಅಲ್ಲದೇ ವಿಡಿಯೊ ಕರೆ ಕಡಿತ ಮಾಡದೆ ಮನೆಯ ಕೊಠಡಿಯಲ್ಲೇ ಇರಬೇಕು. ಈ ವಿಷಯವನ್ನೂ ಯಾರಿಗೂ ತಿಳಿಸಬಾರದು. ಇದರಿಂದ ಭೀತಿಗೆ ಒಳಗಾದ ವೃದ್ಧೆ, ಎರಡು ಖಾತೆಗಳಿಂದ ₹6.80 ಹಾಗೂ ₹3.41 ಲಕ್ಷ ವರ್ಗಾವಣೆ ಮಾಡಿದ್ದರು. ಅದಾದ ಮೇಲೆ ಮತ್ತೆ ₹2 ಲಕ್ಷ ವರ್ಗಾವಣೆ ಮಾಡುವಂತೆ ವ್ಯಕ್ತಿ ಹೇಳಿದ್ದ. ಆಗ ಅನುಮಾನಗೊಂಡ ವೃದ್ಧೆ ದೂರು ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಕರೆಗಳ ವಿವರ ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.