ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡೆಂಗಿ: 494 ಪ್ರಕರಣ ದೃಢ

Published 25 ಜುಲೈ 2024, 18:07 IST
Last Updated 25 ಜುಲೈ 2024, 18:07 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ 494 ಡೆಂಗಿ ಪ್ರಕರಣಗಳು ಹೊಸದಾಗಿ ಗುರುವಾರ ದೃಢಪಟ್ಟಿವೆ. ಇದರಿಂದಾಗಿ ಒಟ್ಟು ಡೆಂಗಿ ಪ್ರಕರಣಗಳ ಸಂಖ್ಯೆ 16,038ಕ್ಕೆ ಏರಿಕೆಯಾಗಿದೆ. 

24 ಗಂಟೆಗಳ ಅವಧಿಯಲ್ಲಿ 3,083 ಪರೀಕ್ಷೆಗಳನ್ನು ನಡಸಲಾಗಿದ್ದು, ಹೊಸದಾಗಿ ದೃಢಪಟ್ಟ ಪ್ರಕರಣಗಳಲ್ಲಿ ಒಂದು ವರ್ಷದೊಳಗಿನ 20 ಮಕ್ಕಳೂ ಸೇರಿದ್ದಾರೆ. ಒಟ್ಟು ಡೆಂಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,319ಕ್ಕೆ ಏರಿಕೆಯಾಗಿದ್ದು, 2,655 ಮಂದಿ ಮನೆ ಆರೈಕೆಗೆ ಒಳಗಾಗಿದ್ದಾರೆ. 13 ಮಂದಿ ಐಸಿಯು ಸೇರಿ 641 ಮಂದಿ ಆಸ್ಪತ್ರೆ ಚಿಕಿತ್ಸೆಗೆ ಒಳಗಾಗಿದ್ದಾರೆ. 

ರಾಜ್ಯದ 24 ಜಿಲ್ಲೆಗಳಲ್ಲಿ ಡೆಂಗಿ ಪ್ರಕರಣಗಳು ಹೊಸದಾಗಿ ವರದಿಯಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 1,268 ಮಂದಿ ಡೆಂಗಿ ಶಂಕಿತರಿಗೆ ಪರೀಕ್ಷೆ ಮಾಡಲಾಗಿದ್ದು, 285 ಮಂದಿಯಲ್ಲಿ ಈ ಜ್ವರ ದೃಢಪಟ್ಟಿದೆ. ಹಾಸನ (30) ಹಾಗೂ ದಾವಣಗೆರೆಯಲ್ಲಿ (21) ಅಧಿಕ ಪ್ರಕರಣಗಳು ಹೊಸದಾಗಿ ಖಚಿತಪಟ್ಟಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT