ಘಟನೆ ವಿವರ:
‘ಉತ್ತರ ಭಾರತದ ವ್ಯಕ್ತಿಯೊಬ್ಬರು ಬೆಂಗಳೂರಿಗೆ ಬಂದಿದ್ದರು. ಕೆಲಸದ ನಿಮಿತ್ತ ರಾಜಾಜಿನಗರಕ್ಕೆ ಬಂದಿದ್ದ ಅವರು ಮೆಟ್ರೊ ಮೂಲಕ ಮೆಜೆಸ್ಟಿಕ್‌ಗೆ ಹೊರಟಿದ್ದರು. ತಲೆ ಮೇಲೆ ಬಟ್ಟೆಯ ಗಂಟು ಹೊತ್ತಿದ್ದರು. ಬಟ್ಟೆಗಳು ಗಲೀಜಾಗಿದ್ದವು. ಸರದಿಯಲ್ಲಿ ನಿಂತು ಟಿಕೆಟ್ ಪಡೆದು ನಿಲ್ದಾಣದೊಳಗೆ ತೆರಳುತ್ತಿದ್ದರು. ಪ್ರವೇಶ ದ್ವಾರದಲ್ಲಿ ಅವರನ್ನು ತಡೆದಿದ್ದ ಸಿಬ್ಬಂದಿ, ‘ನಿನ್ನ ಬಟ್ಟೆಗಳು ಗಲೀಜಾಗಿವೆ. ನಿಲ್ದಾಣದೊಳಗೆ ಬಿಡುವುದಿಲ್ಲ. ಹೊರಗೆ ಹೋಗು’ ಎಂದು ಏರುಧ್ವನಿಯಲ್ಲಿ ಬೆದರಿಸಿದ್ದರು. ಮುಗ್ಧರಾಗಿದ್ದ ವ್ಯಕ್ತಿಗೆ ದಿಕ್ಕು ತೋಚದಂತಾಗಿತ್ತು. ಹಿಂದಿ ಮಾತನಾಡುತ್ತಿದ್ದ ವ್ಯಕ್ತಿ, ಒಳಗೆ ಬಿಡುವಂತೆ ಬೇಡಿಕೊಂಡರೂ ಸಿಬ್ಬಂದಿ ಬಿಟ್ಟಿರಲಿಲ್ಲ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.