ಬೆಂಗಳೂರು: ‘ಸಾವನ್ನಪ್ಪಿರುವ ಉದ್ಯಮಿ ಸಿದ್ಧಾರ್ಥ ಹಾಗೂ ನನ್ನ ನಡುವಿನ ಸಂಬಂಧದ ಬಗ್ಗೆ ಕಪೋಲ ಕಲ್ಪಿತ ಸುದ್ದಿಗಳನ್ನು ಹರಿಯಬಿಡಲಾಗುತ್ತಿದೆ’ ಎಂದು ಶಾಸಕ ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೃತ ಸಿದ್ಧಾರ್ಥ ವಿರುದ್ಧ ಸುಳ್ಳು ಸುದ್ದಿ ಸೃಷ್ಟಿಸುವ ಮೂಲಕ ಮತ್ತೆ ಮತ್ತೆ ಚುಚ್ಚಿ ಸಾಯಿಸಲಾಗುತ್ತಿದೆ. ಇಬ್ಬರ ನಡುವೆ 30 ವರ್ಷಗಳಿಂದ ಸ್ನೇಹವಿದ್ದು, ಅದರ ಆಳ– ಅಗಲ ತಮ್ಮಿಬ್ಬರಿಗೆ ಮಾತ್ರ ಗೊತ್ತು. ಇದನ್ನು ಅರಿಯದ ಕೆಲವರು ಇಲ್ಲ ಸಲ್ಲದ ಸುದ್ದಿಗಳನ್ನು ಸೃಷ್ಟಿಸುತ್ತಿದ್ದಾರೆ ಎಂದುಬೇಸರ ವ್ಯಕ್ತಪಡಿಸಿದ್ದಾರೆ.

‘ನಾನೊಬ್ಬ ರಾಜಕಾರಣಿ, ಉದ್ಯಮಿ, ಸಿದ್ಧಾರ್ಥ ಸಹ ಉದ್ಯಮಿ. ಇಬ್ಬರ ನಡುವೆ ವ್ಯವಹಾರ ಇದ್ದಿದ್ದು ನಿಜ. ಆದರೆ ಅದನ್ನು ಸಾವಿನ ಜತೆ ತಳಕು ಹಾಕುವುದು ಸರಿಯಲ್ಲ. ಉದ್ಯಮಿಗಳಾದ ಮೋಹನ್ ದಾಸ್ ಪೈ, ಕಿರಣ್ ಮಜೂಂದಾರ್ ಷಾ ಅವರು ನೀಡಿರುವ ಹೇಳಿಕೆಗೆಳಿಂದ ಮತ್ತೊಮ್ಮೆ ಕೊಲ್ಲಲಾಗುತ್ತಿದೆ. ಅವರವ್ಯಕ್ತಿತ್ವಕ್ಕೆ ಧಕ್ಕೆ ತರುವ ಸಂಚು ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ವ್ಯವಸ್ಥೆಯ ಹತಾಶೆ ಸಾವಿನ ಕೂಪಕ್ಕೆ ದೂಡಿದೆ. ಕಾಫಿ ಡೇ ಮೂಲಕ ಕರ್ನಾಟಕದ ಹೆಸರನ್ನು ವಿಶ್ವ ಭೂಪಟದಲ್ಲಿ ಛಾಪಿಸಿದ್ದು, ಮಾಡಿದ್ದು, ನಾಡಿನ ಆಸ್ತಿಯಾಗಿದ್ದಾರೆ. ಸತ್ತ ನಂತರ ಸತ್ಯಕ್ಕೆ ದೂರವಾದ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.