ರಾಮನಗರ: ಮಧ್ಯರಾತ್ರಿ ಇಬ್ಬರು ಯುವತಿಯರನ್ನು ಅಪಾರ್ಟ್ಮೆಂಟ್ಗೆ ಕರೆತಂದಿದ್ದನ್ನು ಪ್ರಶ್ನಿಸಿದ ಭದ್ರತಾ ಸಿಬ್ಬಂದಿಗೆ ಯುವಕನೊಬ್ಬ ಹಲ್ಲೆ ನಡೆಸಿರುವ ಘಟನೆ, ಕುಂಬಳಗೋಡು ಬಳಿಯ ದೊಡ್ಡಬೆಲೆಯಲ್ಲಿರುವ ಪ್ರಾವಿಡೆಂಟ್ ಸನ್ವರ್ತ್ ಅಪಾರ್ಟ್ಮೆಂಟ್ನಲ್ಲಿ ಇತ್ತೀಚೆಗೆ ನಡೆದಿದೆ.

ವರುಣ್ ಹಲ್ಲೆ ಮಾಡಿದ ಯುವಕ. ಪುನೀತ್ ಹಲ್ಲೆಗೊಳಗಾದ ಭದ್ರತಾ ಸಿಬ್ಬಂದಿ. ಘಟನೆಗೆ ಸಂಬಂಧಿಸಿದಂತೆ, ಪುನೀತ್ ನೀಡಿದ ದೂರಿನ ಮೇರೆಗೆ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಎನ್.ಸಿ ಮಾಡಿಕೊಳ್ಳಲಾಗಿದೆ.

ವಕೀಲಿಕೆ ವೃತ್ತಿ ಪ್ರಾಕ್ಟೀಸ್ ಮಾಡುತ್ತಿರುವ ವರುಣ್, ಸೆ. 19ರಂ ತನ್ನ ಸ್ನೇಹಿತನೊಂದಿಗೆ ಅಪಾರ್ಟ್ಮೆಂಟ್ನಲ್ಲಿರುವ ಫ್ಲಾಟ್ಗೆ ಇಬ್ಬರು ಯುವತಿಯರನ್ನು ರಾತ್ರಿ 12ರ ಸುಮಾರಿಗೆ ಕರೆ ತಂದಿದ್ದ. ಆಗ ಕರ್ತವ್ಯದಲ್ಲಿದ್ದ ಪುನೀತ್ ಅವರು, 12ರ ನಂತರ ಅಪರಿಚಿತರಿಗೆ ಅಪಾರ್ಟ್ಮೆಂಟ್ಗೆ ಪ್ರವೇಶವಿಲ್ಲ ಎಂಬ ನಿಯಮವಿದೆ ಎಂದು ಹೇಳಿದ್ದಾರೆ. ಇದರಿಂದ ಕೆರಳಿದ ವರುಣ್, ಪುನೀತ್ ಅವರ ಕೆನ್ನೆ ಮತ್ತು ತಲೆಗೆ ಹೊಡೆದಿದ್ದಾನೆ.

‘ನಾನ್ಯಾರು ಗೊತ್ತಾ? ಡಿಸಿಪಿ ಮಗ ಕಣಲೇ. ನಾಳೆ ಬೆಳಿಗ್ಗೆ ನೀನು ಇಲ್ಲಿ ಕೆಲಸಕ್ಕೆ ಇರ್ತಿಯಾ’ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿಸುತ್ತಾ ವರುಣ್ ಹಲ್ಲೆ ನಡೆಸುತ್ತಿರುವ ವಿಡಿಯೊವನ್ನು ಸ್ಥಳೀಯರೊಬ್ಬರು ಸೆರೆ ಹಿಡಿದಿದ್ದಾರೆ. ಅಲ್ಲದೆ, ಆತ ಅಪಾರ್ಟ್ಮೆಂಟ್ ಒಳಕ್ಕೆ ಯುವತಿಯರನ್ನು ಕರೆದೊಯ್ದಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು ವಾಟ್ಸ್ಆ್ಯಪ್ನಲ್ಲಿ ಹರಿದಾಡುತ್ತಿವೆ.

ಹಲ್ಲೆಯಿಂದಾಗಿ ಕಿವಿಗೆ ಗಾಯವಾಗಿದ್ದು, ಸರಿಯಾಗಿ ಕೇಳಿಸುತ್ತಿಲ್ಲ ಎಂದು ಪುನೀತ್ ಅವರು ನೀಡಿದ ದೂರಿನ ಮೇರೆಗೆ ಎನ್.ಸಿ ಮಾಡಿಕೊಳ್ಳಲಾಗಿದೆ. ಆರೋಪಿ ವರುಣ್ನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.