ಬೆಂಗಳೂರು: ‘ಬದುಕು ಅರ್ಥಪೂರ್ಣವಾಗುವುದು ಇನ್ನೊಂದಿಷ್ಟು ಬದುಕುಗಳನ್ನು ಪ್ರೇರೇಪಿಸುವುದರಿಂದ. ಹಾಗೆ, ಸಾವಿರಾರು ಹೋರಾಟಗಾರರಿಗೆ ಸ್ಫೂರ್ತಿಯಾದ ವರು ಕಾಮ್ರೇಡ್ ಸೂರ್ಯನಾರಾಯಣ ರಾವ್’ ಎಂದು ನಟ ಪ್ರಕಾಶ್ ರಾಜ್ ಬಣ್ಣಿಸಿದರು.

ಮಂಗಳವಾರ ಸಿಐಟಿಯು ಸಂಸ್ಥಾಪಕ ಕಾಮ್ರೇಡ್ ಸೂರ್ಯನಾರಾಯಣ ರಾವ್ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ ‘ಶ್ರಮ ಸಂಸ್ಕೃತಿ’ ನಾಟಕೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ರಂಗಭೂಮಿ ಕೆಲಸ ಕೂಡ, ಮತ್ತೊಬ್ಬರನ್ನು ಪ್ರೇರೇಪಿಸುವುದಾಗಿದೆ’ ಎಂದರು.

‘ನಾನು ಸೂರಿ ಅವರನ್ನು ಭೇಟಿಯಾಗಿಲ್ಲ. ಆದರೆ, ಅವರು ಬೆಳೆಸಿದ ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ಕಾರ್ಯಕರ್ತೆಯರ ಪರ ಹೋರಾಟಗಾರರ ಮೂಲಕ ಅವರು ನನಗೆ ಅರ್ಥವಾಗಿದ್ದಾರೆ’ ಎಂದು ಹೇಳಿದರು.

ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ‘1965ರಿಂದ 1991ರವರೆಗೆ ಸೂರಿ ಅವರು ನಡೆಸಿದ ಕಾರ್ಮಿಕ ಚಳವಳಿಗಳು, ಹೋರಾಟಗಳು ಐತಿಹಾಸಿಕವಾದುವು. ಕಾರ್ಮಿಕ ಹೋರಾಟಗಳ ಸ್ವರೂಪ ಮತ್ತು ನಾಯಕರು ಹೇಗಿರಬೇಕು ಎಂಬುದಕ್ಕೆ ಸೂರಿ ಮಾದರಿಯಾಗಿದ್ದರು’ ಎಂದು ಸ್ಮರಿಸಿದರು.

‘1992ರ ನಂತರ ಭಾರತ ಜಾಗತೀಕರಣಕ್ಕೆ ತೆರದುಕೊಂಡ ಮೇಲೆ ಕಾರ್ಮಿಕರು, ಹೋರಾಟ, ರಾಷ್ಟ್ರೀಯತೆಯಂತಹ ಕಲ್ಪನೆ ಬದಲಾಗಿದ್ದು, ಹೋರಾ ಟದ ಸ್ವರೂಪವೂ ಬದಲಾಗಬೇಕಿದೆ’ ಎಂದರು.

ರಂಗ ನಿರ್ದೇಶಕರಾದ ಮಹಾಂತೇಶ ಬಡಿಗೇರ, ಸುಮತಿ ಕೆ.ಆರ್., ಮೈಕೋ ಶಿವಶಂಕರ್, ಹು.ದಾ. ಮುತ್ತುರಾಜ್, ಅಚ್ಯುತ ಕೆ.ಜಿ.ಎಫ್. ಹಾಗೂ ರಂಗ ಸಂಘಟಕ ಸೋಮಶೇಖರ್ ಅವರಿಗೆ ರಂಗಗೌರವ ಸಲ್ಲಿಸಲಾಯಿತು.

ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ್ ಮಾತನಾಡಿದರು. ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷೆ ವರಲಕ್ಷ್ಮಿ, ಉಪಾಧ್ಯಕ್ಷ ವಿ.ಜೆ.ಕೆ. ನಾಯರ್, ಸೂರ್ಯನಾರಾಯಣ ಅವರ ಪುತ್ರಿ ರೇಖಾ, ನಿವೃತ್ತ ಪ್ರಾಧ್ಯಾಪಕ ರಾಜಪ್ಪ ದಳವಾಯಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಭಾ ಕಾರ್ಯಕ್ರಮದ ನಂತರ ’ಜಲಗಾರ’, ‘ನ್ಯಾಯ ಕೇಳಿದ ನಿಂಗವ್ವ’, ‘ಕಾಮ್ರೇಡರ ಸೂರಿ’ ನಾಟಕಗಳನ್ನು ಪ್ರದರ್ಶಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.