ಬೆಂಗಳೂರು: ಎಂಬೆಸಿ ಅರ್ಪಿಸುವ ‘ಕ್ರಾಸಿಂಗ್ ಟು ತಾಳಿಕೋಟಾ’ ನಾಟಕವು ಇದೇ ಶುಕ್ರವಾರದಿಂದ ಭಾನುವಾರದವರೆಗೆ ಪ್ರತಿದಿನ ಸಂಜೆ 7.30ಕ್ಕೆ ಮಲ್ಲೇಶ್ವರದಲ್ಲಿರುವ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ನಡೆಯಲಿದೆ.

ಗಿರೀಶ ಕಾರ್ನಾಡ ಅವರ ಕೊನೆಯ ನಾಟಕ ಕೃತಿ ‘ರಾಕ್ಷಸ–ತಂಗಡಿ’ ಆಧಾರಿತ ನಾಟಕ ಇದಾಗಿದ್ದು, ಇಂಗ್ಲಿಷ್ನಲ್ಲಿಯೂಅವರೇ ಬರೆದಿದ್ದಾರೆ. ಅರ್ಜುನ್ ಸಜ್ನಾನಿ ಅವರು ನಾಟಕ ನಿರ್ದೇಶಿಸಿದ್ದಾರೆ. ಈ ನಾಟಕ ಪ್ರದರ್ಶನಗಳಿಗೆ ‘ಡೆಕ್ಕನ್ ಹೆರಾಲ್ಡ್’ನ ಮಾಧ್ಯಮ ಸಹಯೋಗವಿದೆ.

ನಿರ್ಮಾಣ ವಿನ್ಯಾಸವನ್ನು ಅರುಣ್ ಸಾಗರ್ ಮಾಡಿದ್ದಾರೆ. ಪಿಯಾ ಬೆನಗಲ್ ಅವರ ವಸ್ತ್ರ ವಿನ್ಯಾಸ, ಕ್ಲೇ ಕೆಲ್ಟನ್ ಅವರ ಶಬ್ದ ಹಾಗೂ ವಿಡಿಯೊ ವಿನ್ಯಾಸ, ಪ್ರಕಾಶ್ ಸೊಂಟಕ್ಕೆ ಅವರ ಸಂಗೀತ, ಪ್ರದೀಪ್ ಬೆಳವಾಡಿ ಅವರ ಬೆಳಕಿನ ವಿನ್ಯಾಸ ಈ ನಾಟಕಕ್ಕೆ ಇರಲಿದೆ.

ಅಶೋಕ್ ಮಂದಣ್ಣ, ವಿವೇಕ್ ಜಯಂತ್ ಶಾ, ವೀಣಾ ಸಜ್ನಾನಿ, ಮಾಹಿರ್ ಮೊಹಿಯುದ್ದೀನ್, ಸ್ವಾತಿ ಡೇ, ಸುಸಾನ್ ಜಾರ್ಜ್, ಕಾರ್ತಿಕ್ ಅಯ್ಯರ್, ಮನೋಶ್ ಸೇನ್ಗುಪ್ತ್, ಅಪೂರ್ವ್ ಅನಿರುದ್ಧ್, ಬಾಬ್ಬಿ ಕಾಲ್ರಾ, ಅಭಿಜಿತ್ ಶೆಟ್ಟಿ ರಂಗದ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

‘ಗಿರೀಶ ಕಾರ್ನಾಡ ಅವರು ತಮ್ಮ ‘ಕ್ರಾಸಿಂಗ್ ಟು ತಾಳಿಕೋಟಾ’ ಕೃತಿಯ ನಾಟಕವನ್ನು ಪ್ರದರ್ಶಿಸಲು ಅರ್ಜುನ್ ಸಜ್ನಾನಿಗೆ ನೀಡಿದ್ದರು. ಆದರೆ, ಅದನ್ನು ನೋಡುವ ಮೊದಲೇ ಅವರು ಮೃತರಾದರು. 2019ರಲ್ಲಿ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಈ ನಾಟಕ ಪ್ರದರ್ಶಿಸಲಾಗಿತ್ತು. ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ, ಮತ್ತೆ ಪ್ರದರ್ಶನ ಮಾಡಲಾಗುತ್ತಿದೆ’ ಎಂದು ಪ್ರದೀಪ್ ಬೆಳವಾಡಿ ತಿಳಿಸಿದರು.

‘ಇಲ್ಲಿ ಮೂರು ಪ್ರದರ್ಶನಗಳು ನಡೆದ ಬಳಿಕ ಮುಂಬೈಗೆ ಹೋಗುತ್ತಿದ್ದೇವೆ. ಬಳಿಕ ದೇಶದಾದ್ಯಂತ ಪ್ರದರ್ಶನ ನೀಡುವ ಯೋಜನೆಯಿದೆ. ಈ ನಾಟಕದಲ್ಲಿನ ಎಲ್ಲ ಪಾತ್ರಗಳು 60 ವರ್ಷ ಮೇಲ್ಪಟ್ಟಂಥವು. ಇದು ನಾಟಕದ ವಿಶೇಷವಾಗಿದ್ದು, ಬೆಂಗಳೂರಿನ ಇಂಗ್ಲಿಷ್ ರಂಗಭೂಮಿಯ ಪ್ರಮುಖ ಕಲಾವಿದರು ಇದ್ದಾರೆ. ನಾಟಕದ ಕಥೆ ಸಿನಿಮಾ ರೀತಿಯಲ್ಲಿದೆ’ ಎಂದು ಹೇಳಿದರು.

ನಾಟಕದ ಟಿಕೆಟ್ಗಳು ‘ಬುಕ್ ಮೈ ಶೋ’ದಲ್ಲಿ ಲಭ್ಯವಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.