ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಡಬಲ್‌ ಡೆಕರ್‌’ ರಸ್ತೆಗೆ ಇಂದು ಚಾಲನೆ

Published 16 ಜುಲೈ 2024, 22:35 IST
Last Updated 16 ಜುಲೈ 2024, 22:35 IST
ಅಕ್ಷರ ಗಾತ್ರ

ಬೆಂಗಳೂರು: ರಾಗಿಗುಡ್ಡ–ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ಮೆಟ್ರೊ ಮಾರ್ಗದಲ್ಲಿ ‘ಡಬಲ್‌ ಡೆಕರ್‌’ ಮೇಲ್ಸೇತುವೆ ರಸ್ತೆಗೆ ಬುಧವಾರ ಚಾಲನೆ ದೊರೆಯಲಿದೆ.

‘ನಮ್ಮ ಮೆಟ್ರೊ’ ಆರ್‌.ವಿ. ರಸ್ತೆ –ಬೊಮ್ಮಸಂದ್ರ ಗುಲಾಬಿ ಮಾರ್ಗದಲ್ಲಿ ಮೇಲ್ಸೇತುವೆ ರಸ್ತೆ ಮತ್ತು ಅದರ ಮೇಲೆ ಮೆಟ್ರೊ ರೈಲು ಸಂಚಾರ ವ್ಯವಸ್ಥೆ ಇರುವ ‘ರೋಡ್ ಕಂ ರೇಲರ್‌’ (ಡಬಲ್ ಡೆಕರ್‌) ನಿರ್ಮಾಣಗೊಳ್ಳುತ್ತಿದೆ. ಅದರಲ್ಲಿ ರಾಗಿಗುಡ್ಡದಿಂದ ಸೆಂಟ್ರಲ್‌ ಸಿಲ್ಕ್‌ಬೋರ್ಡ್‌ ಕಡೆಗೆ ಬರುವ ಮೇಲ್ಸೇತುವೆ ರಸ್ತೆ ಕಾಮಗಾರಿ ಮುಗಿದು ಹಲವು ತಿಂಗಳು ಕಳೆದಿತ್ತು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಸ್ತೆಯಲ್ಲಿ ಬುಧವಾರ ನಡೆದು ನಂತರ ವಾಹನಗಳ ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ.

ಸಿಗ್ನಲ್‌ ರಹಿತ ಸಂಚಾರ: ‘ಡಬಲ್ ಡೆಕರ್‌’ನ ಮೇಲ್ಸೇತುವೆ ಸಿಗ್ನಲ್‌ ರಹಿತವಾಗಿರುವುದರಿಂದ ವಾಹನಗಳು ತಡೆರಹಿತವಾಗಿ ಸಂಚರಿಸಲಿವೆ. ಆದರೆ, ವಾಹನಗಳು ಒಮ್ಮೆ ಮೇಲ್ಸೇತುವೆ ಏರಿದರೆ 3.3 ಕಿ.ಮೀ. ಮಧ್ಯೆ ಎಲ್ಲಿಯೂ ಇಳಿಯಲು ಅವಕಾಶವಿಲ್ಲ. ಆದರೆ, ತಿರುಗಿ ಬರಲು ಮೂರು ಯು ಟರ್ನ್‌ಗಳನ್ನು ಒದಗಿಸಲಾಗಿದೆ. ಈ ‘ಡಬಲ್‌ ಡೆಕರ್‌’ ದಕ್ಷಿಣ ಭಾರತದಲ್ಲಿ ಮೊದಲನೆಯದು ಎನ್ನಲಾಗಿದೆ.

ಮೇಲ್ಸೇತುವೆ ರಸ್ತೆ ವಾಹನಗಳಿಗೆ ಮುಕ್ತಗೊಂಡರೆ ಎಲೆಕ್ಟ್ರಾನಿಕ್‌ ಸಿಟಿ ಕಡೆಗೆ ತೆರಳುವವರಿಗೆ ಭಾರಿ ಉಪಯೋಗವಾಗಲಿದೆ. ಜೊತೆಗೆ ಎಚ್‌ಎಸ್‌ಆರ್‌ ಬಡಾವಣೆ ಕಡೆಗೆ, ಬಿಟಿಎಂ ಲೇಔಟ್‌ ಕಡೆಗೆ ಹೋಗುವವರಿಗೆ ಸಮಯ ಉಳಿತಾಯವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT