ಬೆಂಗಳೂರು: ತಲಘಟ್ಟಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ನಾಗೇಗೌಡನ ಪಾಳ್ಯದ ಸೇತುವೆ ಬಳಿ ಲಾರಿ ಹಾಗೂ ಐಷರ್ ವಾಹನದ ನಡುವೆ ಶುಕ್ರವಾರ ಬೆಳಿಗ್ಗೆ ಅಪಘಾತ ಸಂಭವಿಸಿದ್ದು, ಐಷರ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಭುವನೇಶ್ವರಿ ನಗರದ ನಿವಾಸಿ ಶಿವ (47) ಮೃತಪಟ್ಟವರು.

‘ನಾಗೇಗೌಡನ ಪಾಳ್ಯದ ಸೇತುವೆ ಮಾರ್ಗವಾಗಿ ಕೊಯಮತ್ತೂರು ಕಡೆಗೆ ಲಾರಿ ಚಲಿಸುತ್ತಿತ್ತು. ಹಿಂಬದಿಯಿಂದ ಬಂದ ಐಷರ್ ವಾಹನವು ಲಾರಿಗೆ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಚಾಲಕನಿಗೆ ಗಂಭೀರ ಸ್ವರೂಪದ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟರು’ ಎಂದು ಪೊಲೀಸರು ತಿಳಿಸಿದರು.

‘ಐಷರ್ ವಾನಹದಲ್ಲಿ ಕೋಳಿ ಸಾಗಣೆ ಮಾಡಲಾಗುತ್ತಿತ್ತು. ಚಾಲಕ ಅತಿವೇಗವಾಗಿ ವಾಹನ ಚಾಲನೆ ಮಾಡುತ್ತಿದ್ದ. ಅದೇ ಅಪಘಾತಕ್ಕೆ ಕಾರಣ’ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.