ಬೆಂಗಳೂರು: ‘ಸ್ವಾತಂತ್ರ್ಯ ಬಂದಾಗಿನಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಸರ್ಕಾರಗಳು ಹಿಂದಿಯನ್ನು ರಾಜ್ಯಗಳ ಮೇಲೆ ಹೇರಿಕೆ ಮಾಡುತ್ತಾ ಬಂದಿವೆ. ಇದನ್ನು ಧಿಕ್ಕರಿಸುವ ಧೈರ್ಯವನ್ನು ರಾಜ್ಯ ಸರ್ಕಾರಗಳು ತೋರದ ಪರಿಣಾಮವೇ ಕನ್ನಡ ಕಡೆಗಣನೆಯಾಗುವ ಸ್ಥಿತಿಗೆ ತಲುಪಿದ್ದೇವೆ’ ಎಂದು ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಮ್. ಜಾಮದಾರ್ ಬೇಸರ ವ್ಯಕ್ತಪಡಿಸಿದರು.

ಅಕವಿ ಸಂಸ್ಥೆಯು ಆನ್‌ಲೈನ್ ಮೂಲಕ ಭಾನುವಾರ ನಡೆಸಿದ 160ನೇ ಸಭೆಯಲ್ಲಿ ‘ಹಿಂದಿ ಹೇರಿಕೆ ಮತ್ತು ತಾಯಿ ನುಡಿ’ ಎಂಬ ವಿಷಯ ಮೇಲೆ ಅವರು ಮಾತನಾಡಿದರು.

‘ಹಿಂದಿ ಭಾಷೆಯನ್ನು ಹೇರುವ ಪ್ರಯತ್ನಕ್ಕೆ ಸುದೀರ್ಘ ಇತಿಹಾಸವೇ ಇದೆ. ಗಾಂಧೀಜಿ ಒಳಗೊಂಡಂತೆ ಹಲವು ಮಹಾನ್ ನಾಯಕರು ಹಿಂದಿ ಹೇರಿಕೆಗೆ ಕೈಜೋಡಿಸಿದ್ದರು. ರಾಷ್ಟ್ರದಲ್ಲಿ ಶೇ 34 ರಷ್ಟು ಮಂದಿ ಮಾತ್ರ ಹಿಂದಿ ಬಳಸುತ್ತಾರೆ. ಶೇ 66 ರಷ್ಟು ಮಂದಿಯ ಭಾಷೆ ಬೇರೆಯದು. ಹಾಗಾಗಿ ಹಿಂದಿ ಯಾವುದೇ ಕಾರಣಕ್ಕೂ ರಾಷ್ಟ್ರ ಭಾಷೆ ಆಗಲಾರದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.