ಬೆಂಗಳೂರು: ಸ್ಥಳೀಯ ವಿಳಾಸದ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದ ಜಾಲವನ್ನು ಭೇದಿಸಿರುವ ಗಂಗಮ್ಮನಗುಡಿ ಠಾಣೆ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

‘ಕಮ್ಮಗೊಂಡನಹಳ್ಳಿಯ ನಿವಾಸಿ ಕೃಷ್ಣಮೂರ್ತಿ, ಕುವೇಲ್, ರಹೀಂ ಹಾಗೂ ಖಯಾಮ್ ಬಂಧಿತರು. ಇವರಿಂದ ನಕಲಿ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಕೃಷ್ಣಮೂರ್ತಿ, ‘ಶ್ರೀಕೃಷ್ಣ ಕಂಪ್ಯೂಟರ್ಸ್’ ಹೆಸರಿನಲ್ಲಿ ಮಳಿಗೆ ಇಟ್ಟುಕೊಂಡಿದ್ದ. ಇತರ ಆರೋಪಿಗಳ ಜೊತೆ ಸೇರಿ ನಕಲಿ ದಾಖಲೆ ಸೃಷ್ಟಿಸುತ್ತಿದ್ದ. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಮಳಿಗೆ ಮೇಲೆ ದಾಳಿ ಮಾಡಿ, ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ತಿಳಿಸಿದರು.

ಐವರಿಗೆ ನಕಲಿ ದಾಖಲೆ: ‘ಹೊರದೇಶ ಹಾಗೂ ಹೊರ ರಾಜ್ಯಗಳಿಂದ ಬರುತ್ತಿದ್ದವರಿಗೆ ಆರೋಪಿಗಳು, ಸ್ಥಳೀಯ ವಿಳಾಸದ ನಕಲಿ ದಾಖಲೆ ಮಾಡಿಕೊಡುತ್ತಿದ್ದರು. ಇದಕ್ಕಾಗಿ ₹ 500ರಿಂದ ₹ 5,000 ಹಣ ಪಡೆಯುತ್ತಿದ್ದರೆಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

‘ಹೊರದೇಶ– ಹೊರರಾಜ್ಯದವರು ನಕಲಿ ದಾಖಲೆಗಳನ್ನು ಬಳಸಿಕೊಂಡು ಆಧಾರ್, ಪಾಸ್‌ಪೋರ್ಟ್ ಹಾಗೂ ಇತರೆ ದಾಖಲೆಗಳನ್ನು ಪಡೆದಿರುವುದು ಗೊತ್ತಾಗಿದೆ. ನಕಲಿ ದಾಖಲೆ ಪಡೆದಿದ್ದ ಐವರನ್ನು ಪತ್ತೆ ಮಾಡಲಾಗಿದೆ. ಕುವೈತ್ ಹಾಗೂ ಇತರೆ ದೇಶದವರೂ ಆರೋಪಿಗಳಿಂದ ದಾಖಲೆ ಪಡೆದಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.