ಬೆಂಗಳೂರು: ದೇಶದಲ್ಲೇ ’ನಂದಿನಿ’ ಉತ್ಪನ್ನಗಳು ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆ ಉತ್ಪನ್ನಗಳ (ಎಫ್‌ಎಂಸಿಜಿ) ಬ್ರ್ಯಾಂಡ್ ರ‍್ಯಾಂಕಿಂಗ್‌ನಲ್ಲಿ ಆರನೇ ಸ್ಥಾನ ಪಡೆದಿದೆ.

ಕರ್ನಾಟಕ ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾ ಮಂಡಳದ (ಕೆಎಂಎಫ್) ‘ನಂದಿನಿ’ ದೇಶದ ಬಳಕೆದಾರ ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ ಈ ಬಾರಿ ಒಂದು ಸ್ಥಾನ ಮೇಲಕ್ಕೇರಿದೆ.

ಮಾರುಕಟ್ಟೆ ಸಂಶೋಧನಾ ಕಂಪನಿ ‘ಕಾಂಟರ್’ ಬಿಡುಗಡೆ ಮಾಡಿರುವ 2023ನೇ ಸಾಲಿನ ಬ್ರ್ಯಾಂಡ್ ಫ್ರೂಟ್ ವರದಿಯಲ್ಲಿ ಈ ವಿವರ ನೀಡಲಾಗಿದೆ.

ಡೇರಿ ಉತ್ಪನ್ನಗಳ ಪಟ್ಟಿಯಲ್ಲಿ ‘ಅಮೂಲ್’ ಹೊರತುಪಡಿಸಿದರೆ ನಂದಿನಿ ಮಾತ್ರ ಸ್ಥಾನ ಪಡೆದಿದೆ.

ಪಾರ್ಲೆ ಪ್ರಥಮ ಸ್ಥಾನ, ಬ್ರಿಟಾನಿಯಾ ಎರಡನೇ ಸ್ಥಾನ, ಅಮೂಲ್ ಮೂರನೇ ಸ್ಥಾನ, ಕ್ಲಿನಿಕ್ ಪ್ಲಸ್ ನಾಲ್ಕನೇ ಸ್ಥಾನ ಹಾಗೂ ಟಾಟಾ ಐದನೇ ಸ್ಥಾನಗಳನ್ನು ಪಡೆದಿವೆ.

2021ರ ನವೆಂಬರ್‌ನಿಂದ 2022ರ ಅಕ್ಟೋಬರ್ ಅವಧಿಯಲ್ಲಿನ ಮಾಹಿತಿ ಸಂಗ್ರಹಿಸಿ ಈ ರ‍್ಯಾಂಕಿಂಗ್‌ಗಳನ್ನು ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.