ಬೆಂಗಳೂರು: ‘ಸಂಚಾರ ನಿಯಮ ಉಲ್ಲಂಘನೆಗಾಗಿ ದಂಡ ಪಾವತಿಸುವಂತೆ ಪೊಲೀಸರ ಹೆಸರಿನಲ್ಲೇ ಸೈಬರ್ ವಂಚಕರು ಸಂದೇಶ ಕಳುಹಿಸಿ ಜನರನ್ನು ವಂಚಿಸುತ್ತಿದ್ದಾರೆ’ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ( ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗ) ಅಲೋಕ್ ಕುಮಾರ್ ತಿಳಿಸಿದ್ದಾರೆ.

‘ವಂಚಕರು https://echallanparivahan.in/ ಲಿಂಕ್ ತೆರೆದು ದಂಡ ಪಾವತಿಸುವಂತೆ ಮೊಬೈಲ್ಗೆ ಸಂದೇಶ ಕಳುಹಿಸುತ್ತಿದ್ದಾರೆ. ಇದನ್ನು ತೆರೆದ ಕೂಡಲೇ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ ಕ್ಷಣಾರ್ಧದಲ್ಲಿ ಹಣವನ್ನು ವರ್ಗಾವಣೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

‘ವಾಹನ ಚಾಲಕರು ಪೊಲೀಸ್ ಇಲಾಖೆಯಿಂದ ಬಂದಿರುವ ಅಸಲಿ ಲಿಂಕ್ ಮಾತ್ರವೇ ತೆರೆದು ದಂಡ ಶುಲ್ಕ ಪಾವತಿಸಬೇಕು. ಲಿಂಕ್ ಬಂದ ತಕ್ಷಣವೇ ಪರಿಶೀಲನೆ ಮಾಡಿಕೊಂಡು ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಪೊಲೀಸ್ ಇಲಾಖೆ ಕಳುಹಿಸುವ ಅಸಲಿ ಲಿಂಕ್ https://echallan.parivahan.gov.in/ ಎಂಬುದಾಗಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.