ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಯೂಆರ್ ಕೋಡ್‌ ಬಳಸಿ ವಂಚನೆ: ನಾಲ್ವರ ವಿರುದ್ಧ ಎಫ್‌ಐಆರ್‌

Published 20 ಜುಲೈ 2024, 16:27 IST
Last Updated 20 ಜುಲೈ 2024, 16:27 IST
ಅಕ್ಷರ ಗಾತ್ರ

ಬೆಂಗಳೂರು: ಕಚೇರಿಗೆ ಸಂಬಂಧಿಸಿದ ಕ್ಯೂಆರ್ ಕೋಡ್‌ ಬಳಸದೆ ವೈಯಕ್ತಿಕ ಕ್ಯೂಆರ್ ಕೋಡ್‌ ಬಳಸಿ ಲಕ್ಷಾಂತರ ರೂಪಾಯಿ ವಂಚಿಸಿರುವ ಮಯೂರ ಬಾಲಭವನ ಕಿಯೋಸ್ಕ್ ಘಟಕದ ನಾಲ್ವರ ವಿರುದ್ಧ ಕಬ್ಬನ್‌ ಪಾರ್ಕ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಬಂಧ ಕಬ್ಬನ್ ಪಾರ್ಕ್‌ನಲ್ಲಿರುವ ಬಾಲಭವನದ ಕಿಯೋಸ್ಕ್‌ ಘಟಕದ ವ್ಯವಸ್ಥಾಪಕ ನಾಗಭೂಷಣ್ ದೂರು ನೀಡಿದ್ದಾರೆ.

ಆರೋಪಿಗಳಾದ ಜೀಪ್ ಚಾಲಕ ಅಬ್ದುಲ್ ವಾಜೀದ್ ಅವರು ತಮ್ಮ ಕ್ಯೂಆರ್ ಕೋಡ್‌ ಬಳಸಿ ಖಾತೆಗೆ ₹2,66,215, ಸಹಾಯಕ ಕೆ.ವೆಂಕಟೇಶ್‌ ₹48,642 , ದ್ವಿತೀಯ ದರ್ಜೆ ಸಹಾಯಕ ಕೆ.ರಾಮಚಂದ್ರ ₹ 31,917 ಮತ್ತು ಸಹಾಯಕ ಪರಿಚಾರಕ ಕೋದಂಡರಾಮ ₹3,920 ಅನ್ನು ತಮ್ಮ ಖಾತೆಗೆ ಜಮಾ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT