ಬೆಂಗಳೂರು: ಮುಖ್ಯಮಂತ್ರಿಗಳ ಕೌಶಲ ಕರ್ನಾಟಕ ಯೋಜನೆಯಡಿ ಭಾರಿ ಮತ್ತು ಲಘು ವಾಹನ ಚಾಲನಾ, ತಾಂತ್ರಿಕ ತರಬೇತಿಯನ್ನು ಉಚಿತವಾಗಿ ಪಡೆಯಲು ಆಸಕ್ತರನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಆಹ್ವಾನಿಸಿದೆ.

30 ದಿನಗಳ ವಸತಿ ಸಹಿತ ಲಘು ವಾಹನ ತರಬೇತಿಗೆ 18ರಿಂದ 35 ವರ್ಷ ವಯೋಮಿತಿಯವರು ಎಸ್ಎಸ್ಎಲ್ಸಿ ಅಂಕಪಟ್ಟಿ (ಉತ್ತೀರ್ಣ ಅಥವಾ ಅನುತ್ತೀರ್ಣ), ಪಾಸ್ಪೋರ್ಟ್ ಅಳತೆಯ ನಾಲ್ಕು ಭಾವಚಿತ್ರ, ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣಪತ್ರ, ಆಧಾರ್ ಕಾರ್ಡ್ನ ಮೂಲ ಪ್ರತಿಗಳೊಂದಿಗೆ ಕೆಎಸ್ಆರ್ಟಿಸಿ ಕೇಂದ್ರೀಯ ತರಬೇತಿ ಕೇಂದ್ರಕ್ಕೆ ಕೂಡಲೇ ಹಾಜರಾಗಬಹುದು.

ಭಾರೀ ವಾಹನ ಚಾಲನಾ ತರಬೇತಿಗೆ ಈ ದಾಖಲೆಗಳೊಂದಿಗೆ ಲಘು ವಾಹನ ಚಾಲನಾ ಪರವಾನಗಿ, ಸರ್ಕಾರಿ ವೈದ್ಯಾಧಿಕಾರಿಯಿಂದ ದೃಢೀಕರಿಸಿರುವ ವೈದ್ಯಕೀಯ ಪ್ರಮಾಣ ಪತ್ರದ ಮೂಲ ಪ್ರತಿಗಳನ್ನು ತರಬೇಕು.

90 ದಿನಗಳ ಟೈರ್ ಫಿಟ್ಟರ್, ಆಟೊ ಮೆಕ್ಯಾನಿಕ್, ವೆಲ್ಡರ್ ತರಬೇತಿ ಪಡೆಯುವ ಆಸಕ್ತಿ ಇರುವ 18ರಿಂದ 35 ವರ್ಷ ವಯೋಮಾನದವರು ಹಾಜರಾಗಬಹುದು. ಎಸ್ಎಸ್ಎಲ್ಸಿ ಉತ್ತೀರ್ಣ ಹೊಂದಿರುವ ಅಂಕಪಟ್ಟಿ, ಪಾಸ್ಪೋರ್ಟ್ ಅಳತೆಯ 4 ಭಾವಚಿತ್ರ, ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣಪತ್ರ, ಆಧಾರ್ ಕಾರ್ಡ್ನ ಮೂಲ ದಾಖಲೆಗಳನ್ನು ತರಬೇಕು. ಹೆಚ್ಚಿನ ಮಾಹಿತಿಗೆ 080-22221652, 77609 92539, 9606131129 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.