ಬೆಂಗಳೂರು: ‘ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಿ, ಅಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು’ ಎಂದು ನಟಿ ಪೂಜಾ ಗಾಂಧಿ ಹೇಳಿದರು.

‘ಶಿಕ್ಷಣ ತಂಡ’ ಶನಿವಾರ ಆಯೋಜಿಸಿದ್ದ ‘ಶಿಕ್ಷಣ ಅವಾರ್ಡ್ಸ್’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸರ್ಕಾರಿ ಶಾಲೆಗಳ ಉನ್ನತೀಕರಣವಾದರೆ ಮಾತ್ರ ಅಲ್ಲಿ ಕಲಿಯುವ ಮಕ್ಕಳ ಜೀವನದಲ್ಲಿ ಬೆಳಕು ಮೂಡಲು ಸಾಧ್ಯ. ನಾನು ‘ಶಿಕ್ಷಣ ತಂಡ’ದೊಂದಿಗೆ ಕೈಜೋಡಿಸಿ ಶಾಲೆಗಳ ಅಭಿವೃದ್ಧಿಗೆ ಕೆಲಸ ಮಾಡುವೆ’ ಎಂದು ತಿಳಿಸಿದರು.

ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ‘ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳು ಚಲ ಬಿಡದೆ ಓದಿ ಉನ್ನತ ವ್ಯಾಸಂಗ ಮಾಡಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ಜೀವನದಲ್ಲಿ ಯಶಸ್ವಿಯಾಗಬೇಕು’ ಎಂದು ಕರೆ ನೀಡಿದರು.

ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವ ಭರವಸೆ ತಂಡ, ಕನ್ನಡ ಮನಸುಗಳು ತಂಡ, ಗಂಧದ ಗುಡಿ ಬಳಗ, ಅಮೃತ ಹಸ್ತ ತಂಡ ಮತ್ತು ಡಿಸ್ಕಷನ್ ಕ್ಲಾಸ್ ಅಸೋಸಿಯೇಷನ್ ತಂಡಗಳಿಗೆ ‘ಶಿಕ್ಷಣ ಅವಾರ್ಡ್ಸ್’ ಪ್ರದಾನ ಮಾಡಲಾಯಿತು.

ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, ಶಿಕ್ಷಣ ತಂಡದ ಸದಸ್ಯ ವಿನೋದ್ ಕರ್ತವ್ಯ, ಶಂಕರ, ಅಂತೋನಿ, ಗಜೇಂದ್ರ, ಕುಸುಮ ಕುಮಾರ್, ಡಿಆರ್‌ಡಿಒ ವಿಜ್ಞಾನಿ ಶ್ರೀನಿವಾಸನ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.