ಯಲಹಂಕ: ಎನ್ಟಿಟಿ ಡೇಟಾ ಸಂಸ್ಥೆ ಹಾಗೂ ಅಕ್ಷಯ ಪಾತ್ರೆ ಫೌಂಡೇಶನ್ ಸಹಯೋಗದಲ್ಲಿ ನಿರ್ಮಿಸಿರುವ ಲಕ್ಷ್ಮೀಪುರದ ಸರ್ಕಾರಿ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ಸೋಮವಾರ ಉದ್ಘಾಟಿಸಲಾಯಿತು.

ಎನ್ಟಿಟಿ ಡೇಟಾ ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್ಆರ್) ನಿಧಿಯ ಮೂಲಕ ಒದಗಿಸಿದ್ದ ₹4.73 ಕೋಟಿ ಅನುದಾನದಲ್ಲಿ 902 ಚದರ ಮೀಟರ್ ವಿಸ್ತೀರ್ಣದಲ್ಲಿ ಶಾಲೆಯ ನೂತನ ಕಟ್ಟಡವನ್ನು ನಿರ್ಮಿಸಲಾಗಿದೆ. ಎಂಟು ತರಗತಿ ಕೊಠಡಿಗಳು, ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ, ಸಿಸಿಟಿವಿ, ಶೌಚಾಲಯ, ಧ್ವನಿವರ್ಧಕ ವ್ಯವಸ್ಥೆ, ಆ್ಯಂಪಿ ಥಿಯೇಟರ್ ಸೌಲಭ್ಯಗಳನ್ನು ಒದಗಿಸಲಾಗಿದೆ. ಡಿಜಿಟಲ್ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಸದ್ಯ ಈ ಶಾಲೆಯಲ್ಲಿ ಒಟ್ಟು 241 ವಿದ್ಯಾರ್ಥಿಗಳು ಇದ್ದಾರೆ.

ಎನ್ಟಿಟಿ ಡೇಟಾ ಸಂಸ್ಥೆಯ ಮುಖ್ಯ ಡಿಜಿಟಲ್ ಅಧಿಕಾರಿ ದಿಲೀಪ್ ಕುಮಾರ್ ಮಾತನಾಡಿ, ‘ಶಿಕ್ಷಣವು ಅವಕಾಶಗಳ ಬಾಗಿಲನ್ನು ತೆರೆಯುವ ಕೀಲಿಕೈ ಆಗಿದೆ. ಅಕ್ಷಯ ಪಾತ್ರೆ ಫೌಂಡೇಶನ್ ಸಹಯೋಗದಿಂದ ಪ್ರತಿ ಮಗುವಿಗೂ ಉತ್ತಮ ಶಿಕ್ಷಣ ನೀಡುವ, ಅವರ ಕನಸುಗಳನ್ನು ನನಸು ಮಾಡುವ ಅವಕಾಶ ಒದಗಿಸಲಾಗಿದೆ’ ಎಂದರು.

ಅಕ್ಷಯ ಪಾತ್ರೆ ಫೌಂಡೇಶನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಧರ್ ವೆಂಕಟ್ ಮಾತನಾಡಿ, ‘ಸರ್ಕಾರಿ ಶಾಲೆಗಳ ಮಕ್ಕಳ ಕಲಿಕೆಯ ಸ್ಥಳವನ್ನು ಶ್ರೀಮಂತಗೊಳಿಸುವ ಮೂಲಕ ದೀರ್ಘ ಕಾಲದ ಸಾಮಾಜಿಕ ಪರಿಣಾಮ ಉಂಟು ಮಾಡುವುದೇ ನಮ್ಮ ಉದ್ದೇಶವಾಗಿದೆ’ ಎಂದು ಹೇಳಿದರು.

ಶಾಸಕ ಎಸ್.ಮುನಿರಾಜು ಮಾತನಾಡಿದರು. ಮಾಜಿ ಕ್ರಿಕೆಟಿಗ ವಿಜಯ್ ಭಾರದ್ವಾಜ್, ಟೆಕ್ನಾಲಜಿ ಇನ್ಫ್ರಾಸ್ಟ್ರಕ್ಚರ್ ಸರ್ವೀಸಸ್ನ ಹಿರಿಯ ಉಪಾಧ್ಯಕ್ಷ ಆದಿತ್ಯ ಎ. ಪುರ್ಕರ್, ಎನ್ಟಿಟಿ ಡೇಟಾ ಸಂಸ್ಥೆಯ ಉಪಾಧ್ಯಕ್ಷರಾದ ರವಿ ಕಲಘಟಗಿ, ಪ್ರಸಾದ್, ಬಿಇಒ ರಾಮಮೂರ್ತಿ ಬಿ.ಆರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.