ಬೆಂಗಳೂರು: ಪದ್ಮನಾಭನಗರ ವಿಧಾನಸಭೆ ಕ್ಷೇತ್ರದಲ್ಲಿ ‘ಕಾರ್ತಿಕ್ ವೆಂಕಟೇಶ್‌ಮೂರ್ತಿ ಅವರಿಗೆ ಹುಟ್ಟುಹಬ್ಬದ ಶುಭಾಶಯ’ದ ಬ್ಯಾನರ್ ಅಳವಡಿಸಿದ್ದವರ ವಿರುದ್ಧ ಬಿಬಿಎಂಪಿ ಎಫ್‌ಐಆರ್ ದಾಖಲಿಸಿದೆ.

ಬನಶಂಕರಿ 2ನೇ ಹಂತ ದೇವೇಗೌಡ ಪೆಟ್ರೋಲ್ ಬಂಕ್ ವೃತ್ತ, ಎಂ.ಕೆ. ಪುಟ್ಟಲಿಂಗಯ್ಯ ರಸ್ತೆಯ ವಿವಿಧ ಕಡೆಗಳಲ್ಲಿ ಸಾರ್ವಜನಿಕ ಸ್ವತ್ತಿಗೆ ‘ಶುಭಾಶಯ’ದ ಎಂಬ ಬ್ಯಾನರ್‌ಗಳನ್ನು ಅಕ್ರಮವಾಗಿ ಅಳವಡಿಸಿ ನಗರದ ಸೌಂದರ್ಯ ಹಾಳು ಮಾಡಿದ್ದಾರೆ ಎಂದು ಫ್ಲೈಯಿಂಗ್ ಸ್ಕ್ವಾಡ್‌ನ ಅವೀಶ್ ಅವರು ಬನಶಂಕರಿ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ.

ಇಂತಹ ಅನಧಿಕೃತ ಬ್ಯಾನರ್‌ಗಳು ಆಸ್ತಿ ವಿರೂಪ ಕಾಯ್ದೆ ಮತ್ತು ಬಿಬಿಎಂಪಿ ಕಾಯ್ದೆ ಉಲ್ಲಂಘನೆಯಾಗಿದೆ. ಅಕ್ರಮ ಬ್ಯಾನರ್, ಪ್ರದರ್ಶನಗಳ ಬಗ್ಗೆ ದೂರುಗಳನ್ನು ಸ್ಥಳ, ಚಿತ್ರದ ಸಮೇತ ಪಾಲಿಕೆ ವ್ಯಾಟ್ಸ್ ಆ್ಯಪ್ 94806 85700ಗೆ ಕಳುಹಿಸಲು ಬಿಬಿಎಂಪಿ ಮನವಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.