ಬೆಂಗಳೂರು: ನಗರದ ವಿವಿಧೆಡೆ ಹೋಳಿ ಹಬ್ಬವನ್ನು ಬುಧವಾರ ಸಂಭ್ರಮದಿಂದ ಆಚರಿಸಲಾಯಿತು. ಮಕ್ಕಳು, ಯುವಜನರು ಸೇರಿದಂತೆ ಎಲ್ಲ ವಯೋಮಾನದವರು ಬೆಳಿಗ್ಗೆಯಿಂದ ಸಂಜೆ ಯವರೆಗೂ ಬಣ್ಣದಲ್ಲಿ ಮಿಂದೆದ್ದರು.

ಯುವಜನರು ರಸ್ತೆ, ಬೀದಿಗಳಲ್ಲಿ ಬಣ್ಣ ಎರಚಿ ಸಂಭ್ರಮಿಸಿದರು. ಶಾಲಾ–ಕಾಲೇಜು, ಹೋಟೆಲ್‌ಗಳು, ಮೈದಾನಗಳಲ್ಲಿಯೂ ಹೋಳಿ ಆಚರಣೆ ನಡೆಯಿತು. ಕೆಲ ಅಪಾರ್ಟ್‌ಮೆಂಟ್ ವಸತಿ ಸಮುಚ್ಚಯ ಹಾಗೂ ಮನೆಗಳಲ್ಲಿ ಪರಸ್ಪರ ಬಣ್ಣ ಹಚ್ಚಿ, ಸಿಹಿ ಸವಿದರು.

ಯುವಕ, ಯುವತಿಯರು, ಮಕ್ಕಳು, ಮಹಿಳೆಯರೆನ್ನದೆ ಪರಸ್ಪರ ಬಣ್ಣದಾಟದಲ್ಲಿ ತೊಡಗಿಸಿಕೊಂಡಿರುವ ದೃಶ್ಯ ಸಾಮಾನ್ಯವಾಗಿತ್ತು. ಚಿಕ್ಕಮಕ್ಕಳು ಪಿಚಕಾರಿಯಿಂದ ದೊಡ್ಡವರಿಗೆ ಬಣ್ಣ ಎರೆಚುತ್ತಿರುವುದು ಸಾಮಾನ್ಯವಾಗಿ ಕಂಡುಬಂತು. ಬಣ್ಣವಾಟವಾಡಿದ ಮನೆ ಮುಂದೆ ವಿವಿಧ ಬಣ್ಣದ ಅಲಂಕಾರ ಕಂಡುಬಂದಿತು. ರಸ್ತೆಗಳಲ್ಲಿ ಬಣ್ಣದ ಕುರುಹು ಕಾಣುತ್ತಿತ್ತು.

ಬಿಸಿಲಿನ ನಡುವೆಯೂ ಮಕ್ಕಳು ಪಿಚಕಾರಿ ಮೂಲಕ ಬಣ್ಣದ ನೀರನ್ನು ಸಿಡಿಸಿ ಸಂಭ್ರಮಿಸಿದರು. ಕೆಲವೆಡೆ ಡಿ.ಜೆ ಸಂಗೀತಕ್ಕೆ ಮೈಮರೆತು ಯುವಜನರು ಕುಣಿದು ಕುಪ್ಪಳಿಸಿದರು. ಚರ್ಚ್ ಸ್ಟ್ರೀಟ್, ಶೇಷಾದ್ರಿಪುರ, ಕುಮಾರಕೃಪಾ ಮತ್ತು ಶಿವಾನಂದ ವೃತ್ತದಲ್ಲಿ ಯುವಕ–ಯುವತಿಯರು ಬಣ್ಣದಾಟದಲ್ಲಿ ತೊಡಗಿದ್ದರು. ಖಾಸಗಿ ಕಂಪನಿಗಳ ಕಚೇರಿಗಳಲ್ಲಿ ಹೋಳಿ ಸಂಭ್ರಮ ಜೋರಾಗಿತ್ತು.

ನಗರದ ಬಹುತೇಕ ಎಲ್ಲೆಡೆ ಹೋಳಿ ಸಂಭ್ರಮ. ಪಂಚತಾರಾ ಹೊಟೇಲ್‌ಗಳು ಸೇರಿದಂತೆ ಹಲವು ಪ್ರದೇಶಗಳಲ್ಲಿ ಹೋಳಿ ಹಬ್ಬವನ್ನು ಒಂದು ಇವೆಂಟ್ ರೀತಿಯಲ್ಲಿ ಆಚರಿಸಿದ ಯುವ ಜನತೆ ಬಣ್ಣದ ಲೋಕದಲ್ಲಿ ಮಿಂದೆದ್ದರು. ವಿವಿಧ ಬಡಾವಣೆಗಳಲ್ಲಿಯೂ ಮತಭೇದ ಮರೆತು ಪರಸ್ಪರ ಬಣ್ಣಗಳ ಹಂಚಿಕೊಂಡು ಅವುಗಳ ಭಾವ ಸವಿದರು. ಸ್ನೇಹ, ಪ್ರೀತಿಯ ಸಂಕೇತವಾಗಿ ಬಣ್ಣಗಳ ಎರಚಿ ಸಂಬಂಧಗಳ ರಂಗು ಹೆಚ್ಚಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.