ಬೆಂಗಳೂರು: ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿರುವ ಸಿಸಿಬಿ ಪೊಲೀಸರು, ₹ 1.45 ಕೋಟಿ ಮೌಲ್ಯದ ಹುಕ್ಕಾ ಉತ್ಪನ್ನಗಳನ್ನು ಜಪ್ತಿ ಮಾಡಿದ್ದಾರೆ.

ಹುಕ್ಕಾ ಉತ್ಪನ್ನಗಳ ಮಾರಾಟ, ಸೇವನೆ, ಅವುಗಳ ಪರ ಜಾಹೀರಾತು, ಸೇವನೆಗೆ ಪ್ರಚೋದನೆ ಮತ್ತು ಸಂಗ್ರಹಣೆಯನ್ನು ನಿಷೇಧಿಸಿ ಆರೋಗ್ಯ ಇಲಾಖೆ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಸಿಸಿಬಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

‘ಚಾಮರಾಜಪೇಟೆ, ರಾಮಮೂರ್ತಿನಗರ ಹಾಗೂ ಮಹದೇವಪುರ ಠಾಣೆ ವ್ಯಾಪ್ತಿಯಲ್ಲಿ ಮಳಿಗೆಗಳಲ್ಲಿ ಹುಕ್ಕಾ ಉತ್ಪನ್ನಗಳನ್ನು ಅಕ್ರಮವಾಗಿ ಸಂಗ್ರಹಿಸಲಾಗಿತ್ತು. ದಾಳಿ ಮಾಡಿ ಉತ್ಪನ್ನಗಳನ್ನು ಜಪ್ತಿ ಮಾಡಲಾಗಿದ್ದು, 9 ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಕಮಿಷನರ್ ಬಿ. ದಯಾನಂದ್ ತಿಳಿಸಿದರು.

ಮೈಸೂರಿನ ಮುರಳೀಧರ್ (59), ಇ. ಅಂಥೋನಿ (59), ಬೆಂಗಳೂರಿನ ಸಂಪಂಗಿರಾಮನಗರದ ನಿವಾಸಿ ವಿಶ್ವನಾಥ್ ಪ್ರತಾಪ್ ಸಿಂಗ್ (26), ಭರತ್ (29), ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕಂಡಿಬೇಡಳ ಮಧು (36), ಹರಿಕೃಷ್ಣ (35), ಚಿರಕೂರಿ ರಮೇಶ್ (30), ದಿವಾಕರ್ ಚೌಧರಿ (30) ಹಾಗೂ ಮಹದೇವಪುರ ಮಧು (38) ಬಂಧಿತರು.

ತಿಂಗಳಿಗೆ ₹ 25 ಕೋಟಿ: ‘ಆರೋಪಿ ಮುರಳೀಧರ್ ಚಾಮರಾಜಪೇಟೆಯಲ್ಲಿ ಹುಕ್ಕಾ ಉತ್ಪನ್ನಗಳ ಮಾರಾಟ ಮಳಿಗೆ ಇಟ್ಟುಕೊಂಡಿದ್ದ. ಈತನೇ ಬೆಂಗಳೂರಿಗೆ ಪ್ರಮುಖ ವಿತರಕನಾಗಿದ್ದ. ಉಳಿದ ಆರೋಪಿಗಳು, ಉಪ ವಿತರಕರು. ಇವರೆಲ್ಲರೂ ಸೇರಿ ತಿಂಗಳಿಗೆ ₹ 25 ಕೋಟಿ ವಹಿವಾಟು ನಡೆಸುತ್ತಿದ್ದ ಬಗ್ಗೆ ಮಾಹಿತಿ ಇದೆ. ಹೊರ ರಾಜ್ಯಕ್ಕೂ ಉತ್ಪನ್ನಗಳನ್ನು ಕಳುಹಿಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಅಫ್ಜಲ್ ಬ್ರ್ಯಾಂಡ್‌ನ ಮೊಲಾಸಿನ್, ತಂಬಾಕು ಅಂಶವಿದ್ದ ದಿಲ್‌ಬಾಗ್, ಜೆಡ್ ಎಲ್-01, ಆ್ಯಕ್ಷನ್- 7, ಬಾದ್ ಷಾ, ಮಹಾರಾಯಲ್ 717 ಹಾಗೂ ಇತರೆ ಉತ್ಪನ್ನಗಳನ್ನು ಆರೋಪಿಗಳು ಮಾರುತ್ತಿದ್ದರು. ತಮ್ಮ ಬಳಿ ಉತ್ಪನ್ನ ಖರೀದಿಸುತ್ತಿದ್ದ ವ್ಯಾಪಾರಿಗಳಿಗೆ, ಬೆಳ್ಳಿ ಹಾಗೂ ಚಿನ್ನದ ನಾಣ್ಯಗಳನ್ನು ಉಡುಗೊರೆಯನ್ನಾಗಿ ನೀಡುತ್ತಿದ್ದರು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.