ಬೆಂಗಳೂರು: ಕುದುರೆ ರೇಸ್ ಬೆಟ್ಟಿಂಗ್ ನಡೆಸುತ್ತಿದ್ದ 10 ಆರೋಪಿಗಳನ್ನು ಗುರುವಾರ ಬಂಧಿಸಿರುವ ಸಿಸಿಬಿ ಪೊಲೀಸರು, ₹5.91 ಲಕ್ಷ ನಗದು ಜಪ್ತಿ ಮಾಡಿದ್ದಾರೆ.

ಜ್ಯೋತಿ ಬಸು, ಅಂಜಿನಪ್ಪ,ವಿನೋದ್ ಕುಮಾರ್,ಕಬೀರ್ ಅಹಮದ್,ನವಾಜ್ ಅಹಮದ್ಖಾನ್, ಹರೀಶ್, ತಿಮ್ಮರಾಜು, ಅಜಯ್ ಕುಮಾರ್,ಲಿಯಾಕತ್ ಹಾಗೂ ಕೇಶವ ಬಂಧಿತರು.

‘ರೇಸ್ ಕೋರ್ಸ್ ರಸ್ತೆಯ ಟರ್ಫ್ ಕ್ಲಬ್ನ ಗೇಟ್ ನಂಬರ್ 3ರ ಬಳಿ ಆರೋಪಿಗಳು, ಕುದುರೆ ರೇಸ್ಗೆ ಬೆಟ್ಟಿಂಗ್ ಕಟ್ಟಿ ಆಡುತ್ತಿದ್ದರು. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ ಬಂಧಿಸಲಾಗಿದೆ’ ಎಂದು ಸಿಸಿಬಿ ಪೊಲೀಸರು ತಿಳಿಸಿದರು.

₹1.51 ಲಕ್ಷ ಜಪ್ತಿ:ಎಚ್ಎಸ್ಆರ್ ಲೇಔಟ್ ಬಳಿಯ ಮಂಗಮ್ಮನಪಾಳ್ಯ ಮುಖ್ಯರಸ್ತೆಯ ಶಶಿ ರೆಸಿಡೆನ್ಸಿ ಅಪಾರ್ಟ್ಮೆಂಟ್ ಸಮುಚ್ಚಯದ ನಂಬರ್ 1ರ ಕೊಠಡಿಯಲ್ಲಿ ಜೂಜು ಆಡುತ್ತಿದ್ದ 12 ಮಂದಿಯನ್ನು ಗುರುವಾರ ಬಂಧಿಸಿರುವ ಸಿಸಿಬಿ ಪೊಲೀಸರು, ಅವರಿಂದ ₹1.51 ಲಕ್ಷ ಜಪ್ತಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.