ಯೋಜನೆಯಡಿ ಚಿಕಿತ್ಸೆ ಸಂಖ್ಯೆ ಹೆಚ್ಚಳ
‘ಯಶಸ್ವಿನಿ’ ಯೋಜನೆಯಡಿಯೂ ಫಲಾನುಭವಿಗಳು ಗರಿಷ್ಠ ₹ 5 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆ ಪಡೆಯಬಹುದಾಗಿದೆ. ಈ ಯೋಜನೆಯಡಿ ವ್ಯಕ್ತಿಯು ನೆಟ್‌ವರ್ಕ್ ಆಸ್ಪತ್ರೆಗಳಿಗೆ ನೇರವಾಗಿ ತೆರಳಿ ಚಿಕಿತ್ಸೆ ಪಡೆದುಕೊಳ್ಳಬಹುದು. ಇದರಿಂದಾಗಿ ಯೋಜನೆಯ ಫಲಾನುಭವಿಗಳಿಗೆ ಚಿಕಿತ್ಸೆ ಸುಲಭ ಸಾಧ್ಯವಾಗುತ್ತಿದೆ. ಯೋಜನೆ ಮರುಜಾರಿಯಾದ ಬಳಿಕ 478 ಐಸಿಯು ಹಾಗೂ ಎಚ್‌ಡಿಯು ಚಿಕಿತ್ಸೆಗಳನ್ನು ಹೆಚ್ಚುವರಿಯಾಗಿ ಅಳವಡಿಸಿಕೊಳ್ಳಲಾಗಿದೆ. ಇದರಿಂದಾಗಿ ಒಟ್ಟು ಚಿಕಿತ್ಸೆಗಳ ಸಂಖ್ಯೆ ಎರಡು ಸಾವಿರದ ಗಡಿ ದಾಟಿದೆ. ಈ ಮೊದಲು ಯೋಜನೆಯಡಿ 1650 ಚಿಕಿತ್ಸೆಗಳನ್ನು ಒದಗಿಸಲಾಗುತ್ತಿತ್ತು.