ಬೆಂಗಳೂರು: ಭಾರತೀಯ ವಾಯುಪಡೆಯು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಬಿಐಎಎಲ್) ತನ್ನ ಕೆಲವು ರೆಡಾರ್‌ಗಳನ್ನು ಶೀಘ್ರವೇ ಅಳವಡಿಸಲಿದೆ.

ವಿಮಾನ ನಿಲ್ದಾಣದ ಎರಡನೇ ರನ್‌ವೇ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುವ ವೇಳೆ ಯಾವುದೇ ಅಡೆತಡೆಗಳು (ಮಾರ್ಗ ಉಲ್ಲಂಘನೆ) ಉಂಟಾಗದಂತೆ, ಸಂಪೂರ್ಣ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಈಗಾಗಲೇ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಸ್ಥಾಪಿಸಿರುವ ರೆಡಾರ್ ನಿಯಂತ್ರಣ ಕೇಂದ್ರಗಳ ಜತೆಯಲ್ಲಿಯೇ ವಾಯುಪಡೆಯ ರೆಡಾರ್ ಹಾಗೂ ನಿಯಂತ್ರಣ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ನಾಗರಿಕ ವಿಮಾನಸೇವೆಗೆ ಸಂಬಂಧಿಸಿ ಸೇನಾ ರೆಡಾರ್‌ಗಳೂ ಒಂದೇ ಕಡೆ ಸ್ಥಾಪನೆಯಾಗಿ ಕಾರ್ಯನಿರ್ವಹಿಸುತ್ತಿರುವುದು ದೇಶದಲ್ಲೇ ಮೊದಲು ಎಂದು ಸಚಿವಾಲಯ ಹೇಳಿದೆ.

ಇದೇ ವ್ಯವಸ್ಥೆಯು ಸಮೀಪದಲ್ಲಿರುವ ಯಲಹಂಕ ವಾಯುನೆಲೆಯ ನಿಲ್ದಾಣಕ್ಕೂ ಕಣ್ಗಾವಲು ಸೌಲಭ್ಯ ಒದಗಿಸಲಿದೆ. ಇದಕ್ಕಾಗಿ ಭಾರತೀಯ ವಾಯುಪಡೆಯು ವಿಮಾನ ಮತ್ತು ಹೆಲಿಕಾಪ್ಟರ್‌ಗಳ ಸಂಚಾರ ಸಂಬಂಧಿಸಿ ಪ್ರಾಯೋಗಿಕ ತರಬೇತಿ ನಡೆಸುತ್ತಿದೆ.ವಾಯುಕ್ಷೇತ್ರದಲ್ಲಿ ಹಾರಾಡುವ ವಿಮಾನಗಳು ಕನಿಷ್ಠ ರೆಡಾರ್ ಅಂತರವನ್ನು ನಿಖರವಾಗಿ ಕಾಯ್ದುಕೊಳ್ಳಲು ಈ ಕೇಂದ್ರ ನೆರವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.