ಬೆಂಗಳೂರು:ರಾಜ್ಯದ ವಿದ್ಯಾರ್ಥಿಗಳು ತಾರಾಲಯ ವೀಕ್ಷಿಸಲು ಬೆಂಗಳೂರಿಗೇ ಬರಬೇಕಿಲ್ಲ. ಅವರ ಊರಿನಲ್ಲಿ, ಅವರ ಶಾಲೆಗೇ ತಾರಾಲಯ ಹೊರಡಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನೆರವಿನೊಂದಿಗೆ ವರ್ನಾಝ್ ಟೆಕ್ನಾಲಜೀಸ್ ಕಂಪನಿ ಈ ಸಂಚಾರಿ ತಾರಾಲಯ ವನ್ನು ಅಭಿವೃದ್ಧಿಪಡಿಸಿದೆ.

ಈವರೆಗೆ 7 ಲಕ್ಷ ವಿದ್ಯಾರ್ಥಿಗಳು ಈ ತಾರಾಲಯವನ್ನು ವೀಕ್ಷಿಸಿದ್ದಾರೆ. ರಾಯಚೂರು, ಬೀದರ್, ಬೆಳಗಾವಿ, ತುಮಕೂರು, ಬಳ್ಳಾರಿ, ಬೆಂಗಳೂರು, ಮೈಸೂರು ಜಿಲ್ಲೆಗಳಲ್ಲಿ 11 ಸಂಚಾರಿ ತಾರಾಲಯಗಳು ಇವೆ.

ಸೌರವ್ಯವಸ್ಥೆ, ನಕ್ಷತ್ರದ ಸ್ವರೂಪ, ಬಾಹ್ಯಾಕಾಶ, ಗ್ರಹಣದ ಕುರಿತು ವಿಡಿಯೊಗಳನ್ನು ಇದರಲ್ಲಿ ಪ್ರದರ್ಶಿಸಲಾಗುತ್ತದೆ. ಕನ್ನಡ, ಇಂಗ್ಲಿಷ್, ಮರಾಠಿ, ಹಿಂದಿಯಲ್ಲಿ ವಿವರಣೆ ನೀಡಲಾಗುತ್ತದೆ.

ಆಯಾ ತರಗತಿಗೆ ತಕ್ಕಂತೆ ಪಠ್ಯಕ್ರಮವನ್ನು ರೂಪಿಸಲಾಗಿದ್ದು, ಸುಲಭವಾಗಿ ವಿವರಣೆ ಸಿಗುತ್ತದೆ. ಒಂದು ಷೋ ಕನಿಷ್ಠ 15 ನಿಮಿಷದಿಂದ ಗರಿಷ್ಠ 30 ನಿಮಿಷ ಇರುತ್ತದೆ. ಗಾಳಿಯಿಂದ ರೂಪಿಸಲಾದ ‘ಡೂಮ್’ ಒಳಗೆ ಹೋದರೆ, ತಾರಾಲಯ ಪ್ರವೇಶಿಸಿದ ಅನುಭವವಾಗುತ್ತದೆ.ಸರ್ಕಾರಿ ಶಾಲಾ ಮಕ್ಕಳು ಉಚಿತವಾಗಿ ಈ ತಾರಾಲಯ ವೀಕ್ಷಿಸಬಹುದಾಗಿದೆ. ಖಾಸಗಿ ಶಾಲೆಗಳಿಗೆ ದಿನಕ್ಕೆ ₹35 ಸಾವಿರ ಶುಲ್ಕ ನಿಗದಿಪಡಿಸಲಾಗಿದೆ. ದಿನಕ್ಕೆ 500 ವಿದ್ಯಾರ್ಥಿಗಳು ತಾರಾಲಯ ವೀಕ್ಷಿಸಬಹುದು.

ಸಂಪರ್ಕಕ್ಕೆ: 90350 13642.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.