ಯಲಹಂಕ: ‘2040ರ ವೇಳೆಗೆ ಭಾರತವು ವಿಶ್ವದ ಅತ್ಯಂತ ಬಲಿಷ್ಠ ಆರ್ಥಿಕತೆಯ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಇದಕ್ಕೆ ಪೂರಕವಾಗಿ ಇಂದಿನ ವಿದ್ಯಾರ್ಥಿಗಳ ಕೊಡುಗೆ ಮಹತ್ವಪೂರ್ಣವಾಗಲಿದೆ’ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ವಿಶ್ವಾಸ ವ್ಯಕ್ತಪಡಿಸಿದರು.

ರೇವಾ ವಿಶ್ವವಿದ್ಯಾಲಯದಲ್ಲಿ ಭೌಗೋಳಿಕ, ರಾಜಕೀಯ ಮತ್ತು ಅಂತರರಾಷ್ಟ್ರೀಯ ಅಧ್ಯಯನ ಕುರಿತ ಉನ್ನತ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘1835ರಲ್ಲಿ ಥಾಮಸ್ ಬಾಬಿಂಗ್ಟನ್ ಮಕಾಲೆ ಜಾರಿಗೆ ತಂದಿದ್ದ ಶಿಕ್ಷಣ ನೀತಿ ಬ್ರಿಟಿಷ್ ವಸಾಹತುಶಾಹಿಯ ಪ್ರಾಬಲ್ಯಕ್ಕೆ ಪೂರಕವಾಗಿತ್ತು. ಆದರೆ 118 ವರ್ಷಗಳ ನಂತರ ಭಾರತದಲ್ಲಿ ಜಾರಿಯಾಗಿರುವ ಶಿಕ್ಷಣ ನೀತಿಯು ದೇಶದ ಸ್ವಾಭಿಮಾನದ ಪರಿಮಿತಿಯಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಇಂಬು ನೀಡುವಂತಿದೆ. ಉನ್ನತ ಶಿಕ್ಷಣಕ್ಕೂ ಇದು ಅತ್ಯುತ್ತಮವಾದ ನೀತಿಯಾಗಿದೆ‘ ಎಂದರು.

ಭಾರತ ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಅತ್ಯುತ್ತಮ ಆರ್ಥಿಕತೆಯತ್ತ ದಾಪುಗಾಲಿಡುತ್ತಿದ್ದು, ಮುಂದಿನ ಐದು ವರ್ಷಗಳಲ್ಲಿ ಜಗತ್ತಿನ ಮೂರನೆಯ ಅತಿದೊಡ್ಡ ಆರ್ಥಿಕತೆಯ ರಾಷ್ಟ್ರವಾಗಿ ಅಭಿವೃದ್ಧಿ ಹೊಂದಲಿದೆ. ಭೌಗೋಳಿಕ, ರಾಜಕೀಯ ಕ್ಷೇತ್ರಗಳಲ್ಲಿಯೂ ಭಾರತವು ಉನ್ನತ ಸ್ಥಾನಕ್ಕೆ ಏರಲಿದೆ’ ಎಂದು ತಿಳಿಸಿದರು.

ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಪಿ.ಶ್ಯಾಮರಾಜು ಮಾತನಾಡಿ, ‘ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಉನ್ನತ ಶೈಕ್ಷಣಿಕ ಮೌಲ್ಯಗಳನ್ನು ಕಲಿಸುವ ಮಹತ್ವದ ಧ್ಯೇಯದೊಂದಿಗೆ ಆರಂಭವಾಗಿದೆ. ಅತ್ಯುತ್ತಮ ಶಿಕ್ಷಣದ ಜೊತೆಗೆ ಉದ್ಯೋಗ, ವ್ಯಕ್ತಿತ್ವ ವಿಕಸನ, ಪರಿಸರ ಕಾಳಜಿ, ಸಾಮಾಜಿಕ ಜವಾಬ್ದಾರಿ ಸೇರಿದಂತೆ ಪರಿಪೂರ್ಣ ಶಿಕ್ಷಣಕ್ಕೆ ಒತ್ತುನೀಡುತ್ತಾ ಬಂದಿದೆ‘ ಎಂದರು.

ರೇವಾ ವಿವಿ ಕುಲಪತಿ ಡಾ.ಎಂ.ಧನಂಜಯ, ಸಹ ಕುಲಪತಿ ಉಮೇಶ್.ಎಸ್.ರಾಜು, ಕುಲಸಚಿವ ಎನ್.ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.