ಯಲಹಂಕ: ವೆಂಕಟಾಲದ ಅಭಯ ಮಹಾಗಣಪತಿ ದೇವಾಲಯದ 11ನೇ ವಾರ್ಷಿಕೋತ್ಸವದ ಪ್ರಯುಕ್ತ ನ. 4 ಮತ್ತು 5 ರಂದು ಕಡಲೇಕಾಯಿ ಪರಿಷೆ ನಡೆಯಲಿದೆ.

ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ಗಣಪತಿ ಪ್ರಾರ್ಥನೆ, ಕಲಶ ಸ್ಥಾಪನೆ ಆರಾಧನಾ ಪೂರ್ವಕ ಮಹಾಗಣಪತಿ ಸಹಸ್ರ ಮೋದಕ ಹೋಮ, ಮಹಾಪೂರ್ಣಾಹುತಿ ನಂತರ ಸ್ವಾಮಿಗೆ ಪಂಚಾಮೃತ ಅಭಿಷೇಕ, ಕುಂಭಾಭಿಷೇಕ, ವಿಶೇಷ ರಜತ ಅಲಂಕಾರ ಹಾಗೂ ಮಹಾಮಂಗಳಾರತಿ ನೆರವೇರಲಿದೆ.

ಶನಿವಾರ ಬೆಳಿಗ್ಗೆ ಗಣಪತಿಗೆ ವಿವಿಧ ರೀತಿಯ ಪೂಜಾಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ನಂತರ, ದೇವಾಲಯದ ಅಕ್ಕಪಕ್ಕದ ಬೀದಿಗಳಲ್ಲಿ ನಡೆಯುವ ಕಡಲೇಕಾಯಿ ಪರಿಷೆಗೆ ಚಾಲನೆ ದೊರೆಯಲಿದೆ.

ಹತ್ತು ವರ್ಷಗಳಿಂದ ಕಡಲೇಕಾಯಿ ಪರಿಷೆ ನಡೆಸಲಾಗುತ್ತಿದೆ. ಗ್ರಾಹಕರು ಮತ್ತು ವರ್ತಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕೆಂಪೇಗೌಡ ತಿಳಿಸಿದರು. ಈಗಾಗಲೆ ವಿವಿಧ ತಾಲ್ಲೂಕುಗಳು ಹಾಗೂ ಮಂಡಿಗಳಿಗೆ ತೆರಳಿ ವರ್ತಕರು ಮತ್ತು ಕಡಲೇಕಾಯಿ ಮಾರಾಟಗಾರರನ್ನು ಆಹ್ವಾನಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರೋತ್ಸಾಹಧನ:ರಾಶಿ ಹಾಕಿ ಕಡಲೆಕಾಯಿ ವ್ಯಾಪಾರ ಮಾಡುವವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದೇವಸ್ಥಾನದ ವತಿಯಿಂದ ಪ್ರತಿಯೊಬ್ಬರಿಗೂ ₹500 ಪ್ರೋತ್ಸಾಹಧನ ನೀಡಲಾಗುವುದು. ಅಲ್ಲದೆ ಎರಡು ದಿನಗಳಕಾಲ ಕಾಫಿ, ಉಪಹಾರ ಮತ್ತು ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.

ಪರಿಷೆಯಲ್ಲಿ ಗೃಹೋಪಯೋಗಿ ವಸ್ತುಗಳು, ತಿಂಡಿ-ತಿನಿಸುಗಳು, ಮಕ್ಕಳ ಆಟಿಕೆಗಳು ಸೇರಿದಂತೆ ವಿವಿಧ ಮಳಿಗೆಗಳಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಅಲ್ಲದೆ ರಸ್ತೆಯ ಇಕ್ಕೆಲಗಳಲ್ಲಿ ಮನೋರಂಜನಾ ಚಟುವಟಿಕೆಗಳು ನಡೆಯಲಿವೆ ಪರಿಷೆಯಲ್ಲಿ ಭಾಗವಹಿಸಲಿಚ್ಛಿಸುವ ರೈತರು 9980196440 ಸಂಖ್ಯೆಗೆ ಕರೆಮಾಡಿ ತಮ್ಮ ಹೆಸರನ್ನು ನೋಂದಾಯಿಸಲು ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.